ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ಲಕ್ಕೇನಹಳ್ಳಿಯ ಚಿಕ್ಕೀರಯ್ಯ, ರಮೇಶ, ರಾಜಣ್ಣ ಅವರಿಗೆ ಸೇರಿದ ಕುರಿಗಳು ಕೆರೆಯಲ್ಲಿ ನೀರು ಕುಡಿಯಲು ಹೋದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 7 ಕುರಿಗಳು ಸ್ಥಳದಲ್ಲೇ ಸತ್ತಿವೆ. 8 ಕುರಿಗಳು ಅಸ್ವಸ್ಥಗೊಂಡಿವೆ.

ಕೆರೆಯ ಬಳಿ ಎಳೆದಿರುವ ವಿದ್ಯುತ್ ತಂತಿಯ ತುಂಬಾ ಹಳೆಯದಾಗಿದ್ದು ಅದು ತುಂಡಾಗಿ ನೀರೊಳಗೆ ಬಿದ್ದಿರುವುದರಿಂದ ಈ ಅವಘಡ ಸಂಭವಿಸಿದೆ. ಅದನ್ನು ಸರಿಪಡಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಬಿಜೆಪಿಯ ಅಧ್ಯಕ್ಷ ಬೆಟ್ಟಸ್ವಾಮಿ ರೈತರಿಗೆ ಆಗಿರುವ ನಷ್ಟವನ್ನು ಬೆಸ್ಕಾಂ ಇಲಾಖೆಯೇ ಭರಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.