ಭಾನುವಾರ, ಅಕ್ಟೋಬರ್ 17, 2021
22 °C

ಕೊಡಿಗೇನಹಳ್ಳಿ: ಮನೆ ಮೇಲೆ ಉರುಳಿದ ಹುಣಸೆ ಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: ಹೋಬಳಿಯ ದೊಡ್ಡಮಾಲೂರು ಗ್ರಾಮದ ಲಕ್ಷ್ಮೀದೇವಮ್ಮ ಅವರ ಮನೆ ಮೇಲೆ ಗುರುವಾರ ರಾತ್ರಿ ಹುಣಸೆ ಮರ ಬಿದ್ದಿದೆ.

ಲಕ್ಷ್ಮೀದೇವಮ್ಮ ದಂಪತಿ  ನಾಲ್ಕು ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸವಿದ್ದರು. ಕೆಲವು ದಿನಗಳಿಂದ ಲಕ್ಷ್ಮಿದೇವಮ್ಮ ಅವರ ಗಂಡ ನರಸಿಂಹಯ್ಯ ಅವರಿಗೆ ಆರೋಗ್ಯ ಸರಿಯಿಲ್ಲದಿದ್ದರಿಂದ ತಂದೆ ಜೊತೆ ಮಗ ಆಸ್ಪತ್ರೆಗೆ ಹೋಗಿದ್ದರು. ಇನ್ನೊಬ್ಬ ಮಗ ಗಾರೆ ಕೆಲಸಕ್ಕೆಂದು ಬೇರೆ ಗ್ರಾಮಕ್ಕೆ ತೆರಳಿದ್ದರು.

ಮೂರು ದಿನಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮತ್ತು ಗುರುವಾರ ರಾತ್ರಿ ಸುರಿದ ಮಳೆಗೆ ಶುಕ್ರವಾರ ಬೆಳಿಗ್ಗೆ ಹುಣಸೆ ಮರ ಆಕಸ್ಮಿಕವಾಗಿ ಮುರಿದು ಬಿದ್ದಿದೆ. ಮನೆಯ ಮುಂದಿದ್ದ ಶೀಟುಗಳು ನಾಶವಾಗಿ ಗೋಡೆಗಳು ಬಿರುಕು ಬಿಟ್ಟಿವೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ಶಿವಾನಂದಯ್ಯ, ವೃತ್ತ ನಿರೀಕ್ಷಕ ಸುರೇಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಹನುಮಂತರಾಯ, ನರಸಿಂಹಮೂರ್ತಿ, ಲಿಂಗಪ್ಪ ಹಾಗೂ ಮುಖಂಡ ಪಟೇಲ್ ಸಂಜೀವಗೌಡ ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.