ಶುಕ್ರವಾರ, ಡಿಸೆಂಬರ್ 4, 2020
24 °C
ಬಾಗಿನ ಅರ್ಪಣೆ: ದೊಡ್ಡಮಧುರೈ ಗ್ರಾಮದಲ್ಲಿ ಹಬ್ಬದ ವಾತಾವರಣ

20 ವರ್ಷಗಳ ನಂತರ ತುಂಬಿದ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಹೇಮಾವತಿ ವಿತರಣಾ ನಾಲೆ–26 ನಿರ್ಮಾಣವಾಗಿ 20 ವರ್ಷಗಳ ನಂತರ ನೀರು ಹರಿದು ತಾಲ್ಲೂಕಿನ ದೊಡ್ಡಮಧುರೈ ಗ್ರಾಮದ ಕೆರೆ ತುಂಬಿತು.

ಗ್ರಾಮಸ್ಥರು ಭಾನುವಾರ ಶಾಸಕ ಡಾ. ರಂಗನಾಥ್ ನೇತೃತ್ವದಲ್ಲಿ ಸಂಭ್ರಮದಿಂದ ಬಾಗಿನ ಅರ್ಪಿಸಿದರು.

ದೊಡ್ಡಮಧುರೈ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೇವಾಲಯ, ಗ್ರಾಮದ ಪ್ರಮುಖ ಬೀದಿಗಳು ತೋರಣಗಳಿಂದ ಶೃಂಗಾರಗೊಂಡಿತ್ತು.

ವಿತರಣಾ ನಾಲೆ ನಿರ್ಮಾಣಗೊಂಡು 20 ವರ್ಷ ಕಳೆದಿತ್ತು. ನಾಲೆಯಲ್ಲಿ ಹೂಳು ತುಂಬಿ ನೀರು ಹರಿದಿರಲಿಲ್ಲ. ಗ್ರಾಮಸ್ಥರು ಶ್ರಮದಾನದ ಮೂಲಕ ನಾಲೆ ಸ್ವಚ್ಛಗೊಳಿಸಿದ್ದರು. ನಂತರ ಗ್ರಾಮದ ಯುವಕರು ಎಲ್ಲ ಪಕ್ಷಗಳ ನಾಯಕರ ಸಭೆ ಕರೆದು ಹೇಮಾವತಿ ನೀರಿಗಾಗಿ ಹೋರಾಟ ಪ್ರಾರಂಭಿಸಿದ್ದರು. ಶಾಸಕ ಡಾ. ರಂಗನಾಥ್ ಸರ್ಕಾರದ ಗಮನ ಸೆಳೆದು ನೀರನ್ನು ಹರಿಸಿದ ಕಾರಣ ಕೆರೆ ತುಂಬಿದೆ. ನೀರು ತುಂಬಲು ಶ್ರಮಿಸಿದ ಶಾಸಕರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಭಾನುವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಶಾಸಕ ಡಾ.ರಂಗನಾಥ್ ಅವ
ರನ್ನು ಗ್ರಾಮಸ್ಥರು ಪೂರ್ಣ ಕುಂಭ
ದೊಂದಿಗೆ ಸ್ವಾಗತಿಸಿ ನಂತರ ಕೆರೆಗೆ ಬಾಗಿನ ಅರ್ಪಿಸಿದರು. ಪ್ರಮುಖ ದೇವಾಲ
ಯಗಳಲ್ಲಿ ಪೂಜೆ ಸಲ್ಲಿಸಲಾಯಿತು.

ಶಾಸಕ ಡಾ. ರಂಗನಾಥ್ ಪ್ರತಿಕ್ರಿಯಿಸಿ, ‘ಡಿ.ಕೆ.ಶಿವಕುಮಾರ್ ಜಲಸಂ‍ಪನ್ಮೂಲ ಸಚಿವರಾಗಿದ್ದಾಗ ನಾಲೆಗಳ ಅಭಿವೃದ್ಧಿಗೆ ₹9 ಕೋಟಿ ಬಿಡುಗಡೆ ಮಾಡಿದ ಕಾರಣ ನಾಲೆ ಸ್ವಚ್ಛಗೊಳಿಸಲಾಗಿತ್ತು. ಇದರಿಂದಾಗಿ ನೀರು ಸರಾಗವಾಗಿ ಹರಿದು ದಾಖಲೆಯಾಗಿದೆ. ವಿತರಣಾ ನಾಲೆ 26ರಲ್ಲಿ ನೀರು ಹರಿದ ಪರಿಣಾಮ ಯಡೆಯೂರು ಹೋಬಳಿಯ 14 ಕೆರೆಗಳಿಗೆ ನೀರು ಬಂದಿದೆ ಎಂದರು. ‌‌

ತಾಲ್ಲೂಕಿಗೆ ನೇರವಾಗಿ ಹೇಮಾವತಿ ನೀರು ಹರಿಯಲು ಸಂಪರ್ಕ ಕಾಲುವೆ ನಿರ್ಮಾಣಕ್ಕೆ
₹615 ಕೋಟಿ ಮಂಜೂರಾಗಿತ್ತು. ಈ ಯೋಜನೆಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿತ್ತು. ನೀರು ಹರಿಯುವ ಸಾಧ್ಯತೆ ಕಡಿಮೆ ಇರುವ ಶ್ರೀರಂಗ ಏತನೀರಾವರಿ ಯೋಜನೆಗೆ ₹480 ಕೋಟಿ ನೀಡಲು ಸರ್ಕಾರ ಸಿದ್ಧವಾಗಿದೆ. ಸಂಪರ್ಕ ಕಾಲುವೆ ನಿರ್ಮಾಣವಾಗದ ಹೊರತು ತಾಲ್ಲೂಕಿಗೆ ಹೇಮಾವತಿ ನೇರವಾಗಿ ಹರಿಯಲು ಸಾಧ್ಯವಿಲ್ಲ. ಹೇಮಾವತಿ ನೀರು ಹರಿಯದ ಹೊರತು ಶ್ರೀರಂಗ ಏತನೀರಾವರಿ ಯೋಜನೆ ಯಶಸ್ವಿಯಾಗುವುದಿಲ್ಲ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು