ಕೊಡಿಗೇನಹಳ್ಳಿ (ಮಧುಗಿರಿ): ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಶಿಕ್ಷಕ ದಂಪತಿ ಹಾಗೂ ಮಕ್ಕಳು ರಸ್ತೆಯಲ್ಲಿ ಬಿದ್ದಿದ್ದ ದೊಡ್ಡ ಗುಂಡಿಯನ್ನು ಮುಚ್ಚಿ ಮಾನವೀಯತೆ ಮೆರೆದಿದ್ದಾರೆ!

ಮಧುಗಿರಿ ತಾಲ್ಲೂಕಿನ ಗೊಂದಿಹಳ್ಳಿ ಹಾಗೂ ಕೋಡ್ಲಾಪುರ ಗ್ರಾಮದ ಶಿಕ್ಷಕ ಫಣೀಂದ್ರನಾಥ ಹಾಗೂ ಪಿ.ಜಿ.ಇಂದ್ರಮ್ಮ ಮತ್ತು ಅವರ ಮಕ್ಕಳಾದ ಸಿರಿ ಹಾಗೂ ಕಲ್ಯಾಣ್ ಶನಿವಾರ ಶಾಲೆ ಮುಗಿಸಿಕೊಂಡು ಬರುತ್ತಿದ್ದರು. ಪುರವರ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಮೋರಿ ಬಳಿ ರಸ್ತೆ ದೊಡ್ಡದಾಗಿ ಗುಂಡಿ ಬಿದ್ದಿರುವುದನ್ನು ಗಮನಿಸಿದ ಅವರು ಗುಂಡಿಯಲ್ಲಿ ವಾಹನ ಸವಾರರು ಬಿದ್ದು ಅನಾಹುತ ಆಗದಂತೆ ತಪ್ಪಿಸಲು ತಾವೇ ಖುದ್ದು ಪಕ್ಕದಲ್ಲಿದ್ದ ಜಲ್ಲಿ ಹಾಗೂ ಮಣ್ಣನ್ನು ತಂದು ರಸ್ತೆ ಸರಿಪಡಿಸಿದ್ದಾರೆ. ಇದನ್ನು ನೋಡಿದ ಸವಾರರು ಹಾಗೂ ಸಾರ್ವಜನಿಕರು ಅವರ ಕಾರ್ಯಕ್ಕೆ ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.