ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ಮಕ್ಕಳಿಗೆ ಗುಲಾಬಿ ನೀಡಿದ ಶಿಕ್ಷಕರು

Last Updated 7 ಸೆಪ್ಟೆಂಬರ್ 2021, 5:06 IST
ಅಕ್ಷರ ಗಾತ್ರ

ಮಧುಗಿರಿ: ಕೊರೊನೊ ಭಯ ಬಿಟ್ಟು ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಹೂಗಳನ್ನು ನೀಡಿ ಶಿಕ್ಷಕರು ಆತ್ಮೀಯವಾಗಿ ಬರ
ಮಾಡಿಕೊಂಡರು.

ಕಳೆದ ಎರಡು ವರ್ಷಗಳಿಂದ ಕೊರೊನಾ ಆರ್ಭಟಕ್ಕೆ ಸರಿಯಾಗಿ ಶಾಲೆಗಳು ನಡೆಯದೇ ಮಕ್ಕಳು ಮನೆಯಲ್ಲಿಯೇ ಇದ್ದು ಆನ್‌ಲೈನ್ ತರಗತಿ ಮೂಲಕ ಪಾಠ ಕಲಿಯುತ್ತಿದ್ದರು. ಸೋಮವಾರ 6, 7 ಮತ್ತು 8ನೇ ತರಗತಿ ಪ್ರಾರಂಭವಾದ್ದರಿಂದ ಶಾಲೆಯ ಕೊಠಡಿ ಹಾಗೂ ಆವರಣವನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್‌ ಮಾಡಿಸಿದ್ದರು. ಗ್ರಾಮದ ಯುವಕ, ಯುವತಿಯರು ಶಾಲೆಯ ಆವರಣದಲ್ಲಿ ರಂಗೋಲಿ ಮತ್ತು ಹಸಿರು ತೋರಣಗಳಿಂದ ಅಲಂಕಾರ ಮಾಡಿದ್ದರು.

ಮಕ್ಕಳು ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತಾ ನಗುಮುಖದಿಂದ ಶಾಲೆಯ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಂತು ಶಿಕ್ಷಕರು ನೀಡುತ್ತಿದ್ದ ಗುಲಾಬಿ ಹೂ ಪಡೆದುಕೊಂಡು ಶಿಕ್ಷಕರಿಗೆ ನಮಸ್ಕಾರ ಹೇಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಶಾಲೆಗೆ ಬಂದ ಮಕ್ಕಳ ಮುಖದಲ್ಲಿ ಮುಖಗವಸು ಹಾಗೂ ಅಂತರ ಕಾಯ್ದುಕೊಂಡು ಪಾಠ ಕೇಳಿದರು. ಸ್ನೇಹಿತರ ಜೊತೆ ಬೆರೆತು ಕೊರೊನಾ ಸೋಂಕಿನ ತಡೆ ಬಗ್ಗೆ ಜಾಗೃತಿ ಮೂಡಿಸಿದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲ ದಿನವೇ ಶೇ 60ರಷ್ಟು ಮಕ್ಕಳು ಶಾಲೆಗೆ ಹಾಜರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT