ಸೋಮವಾರ, ಜೂನ್ 27, 2022
28 °C

ತಿಪಟೂರು: ವಿದ್ಯಾರ್ಥಿಗಳ ವನ ಕಾಳಜಿ

ಎಚ್.ಬಿ. ಸುಪ್ರತೀಕ್ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ನಗರದ ಎಸ್‌ವಿಪಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಶಾಲೆ ಆವರಣ, ರಸ್ತೆ ಬದಿ ಸೇರಿದಂತೆ ವಿವಿಧೆಡೆ ಸಸಿಗಳನ್ನು ನೆಟ್ಟು ಪೋಷಿಸುತ್ತಿದೆ.

ಒಂದೂವರೆ ವರ್ಷದಿಂದ ಲಾಕ್‍ಡೌನ್ ಸಂದರ್ಭದಲ್ಲಿಯೂ ಗಿಡಗಳಿಗೆ ನೀರು ಹಾಕಲಾಗುತ್ತಿದೆ. ಸಂಸ್ಥೆಯ ಸಂಸ್ಥಾಪನಾ ಅಧ್ಯಕ್ಷ ಎಸ್.ಕೆ.ರಾಜಶೇಖರ್‌ ತಮ್ಮ 85ನೇ ವಯಸ್ಸಿನಲ್ಲಿಯೂ ಪರಿಸರ ರಕ್ಷಣೆಯಲ್ಲಿ ಉತ್ಸಾಹದೊಂದಿಗೆ
ಭಾಗಿಯಾಗಿದ್ದಾರೆ.

ಕಳೆದ ಎಂಟು, ಹತ್ತು ವರ್ಷಗಳಿಂದ ಕೆಎಸ್‌wwಆರ್‌ಟಿಸಿ ಬಸ್ ನಿಲ್ದಾಣ, ಆಟೊ ನಿಲ್ದಾಣ ಸೇರಿದಂತೆ ನಗರದ ಆಯಕಟ್ಟಿನ ವಿವಿಧ ಬಡಾವಣೆಗಳಲ್ಲಿ, ಉದ್ಯಾನಗಳಲ್ಲಿ ಗಿಡಗಳನ್ನು ನೆಟ್ಟು, ಪೋಷಿಸಿರುವುದಕ್ಕೆ ಸಾಕ್ಷಿಯಾಗಿ ಇಂದು ನೂರಾರು ಮರಗಳು ನೆರಳು ನೀಡುತ್ತಿವೆ. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿಯೂ ಗಿಡ-ಮರಗಳನ್ನು ನೆಟ್ಟಿದ್ದಾರೆ. ಆ ಮೂಲಕ ಗ್ರಾಮದ ಜನರಲ್ಲಿಯೂ ಪರಿಸರದ ಅರಿವು ಮೂಡಿಸಿದ್ದಾರೆ.

ಪ್ರತಿಯೊಬ್ಬರು ಜವಾಬ್ದಾರಿಯಿಂದ ಪರಿಸರ ಸಂರಕ್ಷಿಸುವ ಸಂಕಲ್ಪ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಆಮ್ಲಜನಕ ಸಿಗದಂತಹ ಸ್ಥಿತಿಗೆ ತಲುಪುತ್ತೇವೆ. ಹಾಗಾಗಿ ಎಲ್ಲರೂ ಗಿಡ, ಮರ ರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎನ್ನುತ್ತಾರೆ ಎಸ್.ಕೆ.ರಾಜಶೇಖರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು