ಮಂಗಳವಾರ, ಮೇ 17, 2022
24 °C

ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ರಂಗಕರ್ಮಿ, ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ (47) ಬುಧವಾರ ಮುಂಜಾನೆ ಹೃದಯಾಘಾತದಿಂದ  ನಿಧನರಾದರು.

ಅವರಿಗೆ ಪತ್ನಿ ಶೀಲಾ, ಮಕ್ಕಳಾದ ವೆನಿಲ್ಲಾ, ಸಹಜ ಇದ್ದಾರೆ. ಅಂತ್ಯಸಂಸ್ಕಾರ ಬುಧವಾರ ಹಾಲ್ಕುರಿಕೆ ಗ್ರಾಮದಲ್ಲಿ ನೆರವೇರಿತು. ವಿವಿಧ ರಂಗಕಲೆಗಳಲ್ಲಿ ತೊಡಗಿಸಿಕೊಂಡಿದ್ದ ಶಿವಶಂಕರ್‌, ‘ಹಾಲ್ಕುರಿಕೆ ಥಿಯೇಟರ್ ಮೀರರ್’ ಎನ್ನುವ ಪತ್ರಿಕೆ ಪ್ರಾರಂಭಿಸಿ, ವಿಶಿಷ್ಟ ಬರವಣಿಗೆಗಳ ಮೂಲಕ ಓದುಗರ ಮೆಚ್ಚುಗೆ ಗಳಿಸಿದ್ದರು.

ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವ ನಿಟ್ಟಿನಲ್ಲಿ ಕೊಪ್ಪಳದಲ್ಲಿ ಹಾಲ್ಕುರಿಕೆ ಥಿಯೇಟರ್ ಎನ್ನುವ ರಂಗನಾಟಕ ಶಾಲೆ ಪ್ರಾರಂಭಿಸಿದ್ದರು. ‘ರಂಗವಿಜ್ಞಾನಿ’ ಎನ್ನುವ ಬಿರುದು ಪಡೆದಿದ್ದರು. ಕೇಂದ್ರ ನಾಟಕ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಇವರು, ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ನಡೆದ ಹೊನ್ನವಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು