ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ | ಹನಿ ನೀರಾವರಿ ಸಾಮಗ್ರಿ ಕಳವು: ರೈತರ ದೂರು

Published 9 ಮೇ 2023, 12:49 IST
Last Updated 9 ಮೇ 2023, 12:49 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹನಿ ನೀರಾವರಿ ಸಾಮಗ್ರಿ ಕಳುವಾಗುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.

ರೆಡ್ಡಿವಾಋ್ಲಹಳ್ಳಿ ಗ್ರಾಮದ ನರಸಿಂಹರೆಡ್ಡಿ ಅವರ ಜಮೀನಿನಲ್ಲಿನ ₹3 ಲಕ್ಷ ಮೌಲ್ಯದ ಹನಿ ನೀರಾವರಿ ಪೈಪ್ ಇತ್ಯಾದಿ ಸಲಕರಣೆಗಳನ್ನು ಶನಿವಾರ ರಾತ್ರಿ ಕಳ್ಳರು ಕಳವು ಮಾಡಿದ್ದಾರೆ. ಈ ಬಗ್ಗೆ ತಿರುಮಣಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಮೇ 6ರಂದು ನಾಗಲಮಡಿಕೆ ಹೋ ರೆಡ್ಡಿವಾರಹಳ್ಳಿ ಗ್ರಾಮದ ನರಸಿಂಹ ರೆಡ್ಡಿ ಅವರಿಗೆ ಸೇರಿದ್ದ 8 ಎಕರೆ ವಿಸ್ತೀರ್ಣದ ಡ್ರಿಪ್ ಪೈಪ್ ಮತ್ತು ಪೈಪ್‌ಗಳನ್ನು ಕಳ್ಳರು ರಾತ್ರಿ ಕಳ್ಳತನ ಮಾಡಿದ್ದು ಇದರ ಬೆಲೆ ₹3 ಲಕ್ಷ. ರೈತ ನರಸಿಂಹ ರೆಡ್ಡಿ ತಿರುಮಣಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಕಳೆದ ವಾರ ಅನ್ನದಾನಪುರ ಗ್ರಾಮದ ರೈತ ಶ್ರೀರಾಮಪ್ಪ ಅವರ ಜಮೀನಿನಲ್ಲಿ ಎರಡು ಎಕರೆ ಜಮೀನಿನಲ್ಲಿ ಅಳವಡಿಸಿದ್ದ ₹1 ಲಕ್ಷ ಮೌಲ್ಯದ ಸಾಮಗ್ರಿ ಕಳ್ಳತನವಾಗಿವೆ.

ನಾಗೇನಹಳ್ಳಿ ಗ್ರಾಮದ ರೈತ ವೆಂಕಟೇಶಪ್ಪ ಅವರಿಗೆ ಸೇರಿರುವ ₹1 ಲಕ್ಷ ಬೆಲೆಯ ಎರಡು ಎಕರೆಯಲ್ಲಿನ ಡ್ರಿಪ್ ಪೈಪ್ ಕಳ್ಳತನವಾಗಿದೆ.

ರೈತರು ಬೆಳೆ ತೆಗೆಯುವ ಮುನ್ನವೇ ಸಾಮಗ್ರಿ ಕಳ್ಳತನವಾಗುತ್ತಿರುವುದು ಆತಂಕ ಮೂಡಿಸಿದೆ. ಸಂಬಂಧಿಸಿದವರು ಕೂಡಲೇ ಕಳ್ಳರನ್ನು ಪತ್ತೆ ಮಾಡಬೇಕು. ಮುಂದಿನ ದಿನಗಳಲ್ಲಿ ಕೃಷಿ ಸಾಮಗ್ರಿ ಕಳವಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ನರಸಿಂಹ ರೆಡ್ಡಿ, ನರೇಂದ್ರ, ಅನ್ನದಾನಪುರ ರೈತ ಆದಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT