ತುಮಕೂರು: ನಗರದಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ನಿಲುಗಡೆಗೆ ಸ್ಥಳಾವಕಾಶ ಸಿಗದೆ ಪರದಾಡುವಂತಾಗಿದೆ. ಜನಸಂದಣಿ ಇರುವ ಪ್ರಮುಖ ರಸ್ತೆ ಸೇರಿದಂತೆ ಸಿಕ್ಕ ಜಾಗಗಳಲ್ಲಿ ನಿಲುಗಡೆ ಮಾಡುತ್ತಿದ್ದು, ಸುಗಮ ಸಂಚಾರ ಬಲು ಕಷ್ಟಕರವಾಗುತ್ತಿದೆ.

ಪ್ರತಿ ದಿನ ನೂರಾರು ಜನ ಸೇರುವ, ಪ್ರಮುಖ ವ್ಯಾಪಾರ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಲಾಗುತ್ತಿದೆ. ಎಂ.ಜಿ.ರಸ್ತೆ, ಅಶೋಕ ರಸ್ತೆ, ರೈಲು ನಿಲ್ದಾಣ ರಸ್ತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದ ರಸ್ತೆ, ಬಿ.ಎಚ್.ರಸ್ತೆ ಒಳಗೊಂಡಂತೆ ಎಲ್ಲ ರಸ್ತೆಗಳಲ್ಲಿ ಬೈಕ್, ಕಾರ್ಗಳು ನಿಂತಿರುತ್ತವೆ.

ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ನಗರದಿಂದ ಬೆಂಗಳೂರು ಸೇರಿದಂತೆ ಇತರೆಡೆಗೆ ಹೋಗುವವರು ಬೈಕ್ಗಳನ್ನು ಬಸ್ ನಿಲ್ದಾಣ, ವಿಶ್ವವಿದ್ಯಾಲಯದ ಬಳಿ ಮತ್ತು ರೈಲು ನಿಲ್ದಾಣದ ಹತ್ತಿರ ನಿಲ್ಲಿಸುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗಲು ಇದೂ ಒಂದು ಪ್ರಮುಖ ಕಾರಣವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ಸಾಲು ಕಂಡು ಬರುತ್ತದೆ.

ವಾಹನ ಸವಾರರು ಸಿಕ್ಕ–ಸಿಕ್ಕಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದು ಕಳ್ಳರ ಪಾಲಿಗೆ ವರವಾಗಿ ಪರಿಣಮಿಸಿದೆ. ಹಗಲು ಹೊತ್ತಿನಲ್ಲೇ ಬೈಕ್ ಕಳವು ಮಾಡಲು ಸುಲಭವಾಗಿಸಿದೆ. ಕಳೆದ ಎರಡು ವರ್ಷಗಳಿಂದ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳೇ ಹೆಚ್ಚಾಗಿ ಕಳ್ಳತನವಾಗಿವೆ. ಇಲ್ಲಿ ಯಾವುದೇ ಪೊಲೀಸರು ಕಾವಲು ಇರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಕೈಚಳಕ ತೋರುತ್ತಿದ್ದಾರೆ. ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಯೋಜನೆ ರೂಪಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.

4 ಕಡೆ ಪಾರ್ಕಿಂಗ್: ಇಡೀ ನಗರದಾದ್ಯಂತ ಕೇವಲ 4 ಕಡೆ ಮಾತ್ರ ದ್ವಿಚಕ್ರ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಎಲ್ಲ ಕಡೆ ರಸ್ತೆಗಳೇ ವಾಹನ ನಿಲುಗಡೆಯ ಸ್ಥಳಗಳಾಗಿವೆ. ಹೊಸ ಬಸ್ ನಿಲ್ದಾಣ, ರೈಲು ನಿಲ್ದಾಣ, ಹಳೆಯ ಬಸ್ ನಿಲ್ದಾಣದ ರಸ್ತೆ, ರೆಡ್ಕ್ರಾಸ್ ಕಟ್ಟಡದ ಬಳಿ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಎಲ್ಲರು ಈ ಜಾಗದಲ್ಲಿ ವಾಹನ ನಿಲ್ಲಿಸುತ್ತಿಲ್ಲ.

ಬಸ್ ನಿಲ್ದಾಣದ ಬಳಿ ಪಾರ್ಕಿಂಗ್ಗೆ ಅವಕಾಶ ಇದ್ದರೂ ಹೆಚ್ಚಿನ ಜನ ಇದನ್ನು ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುತ್ತಿದ್ದಾರೆ. ಅಶೋಕ ರಸ್ತೆಯುದ್ದಕ್ಕೂ ಸಾಲು ಸಾಲಾಗಿ ಬೈಕ್, ಆಟೊ ಪಾರ್ಕಿಂಗ್ ಮಾಡಲಾಗುತ್ತಿದೆ. ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು ತಿರುವು ಪಡೆದುಕೊಂಡು ನಿಲ್ದಾಣದ ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಫುಟ್ಪಾತ್ ಬಾಡಿಗೆಗೆ ಇದೆ!

ಒಂದೆಡೆ ಇಡೀ ರಸ್ತೆಯನ್ನು ಬೈಕ್ಗಳು ಆಕ್ರಮಿಸಿಕೊಂಡರೆ ಮತ್ತೊಂದು ಕಡೆ ಪಾದಚಾರಿ ರಸ್ತೆ ಫುಟ್ಪಾತ್ ವ್ಯಾಪಾರಿಗಳು ಅಂಗಡಿ ಮಳಿಗೆ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಜನ ಅನಿವಾರ್ಯವಾಗಿ ರಸ್ತೆಯ ಮಧ್ಯೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಅಪಘಾತಕ್ಕೂ ಎಡೆ ಮಾಡಿಕೊಡುತ್ತಿದೆ. ‘ಎಂ.ಜಿ.ರಸ್ತೆಯಲ್ಲಿ ಮಳಿಗೆ ಮುಂಭಾಗದ ಫುಟ್ಪಾತ್ನಲ್ಲಿ ಜನರ ಓಡಾಟಕ್ಕೆ ಜಾಗವೇ ಇಲ್ಲವಾಗಿದೆ. ಅಂಗಡಿ ಮಾಲೀಕರು ಪಾನಿಪುರಿ ಮಸಾಲೆ ಪುರಿ ಮಾರಾಟ ತಳ್ಳುವ ಗಾಡಿಯವರಿಗೆ ಕೊಟ್ಟು ಅವರಿಂದ ಬಾಡಿಗೆ ಪಡೆಯುತ್ತಿದ್ದಾರೆ. ಇವೆರಡನ್ನೂ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾದ ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ’ ಎಂದು ರಮೇಶ್ ಆಕ್ರೋಶ ವ್ಯಕ್ತಪಡಿಸುತ್ತಾರೆ. ನಗರದ ಬಹುತೇಕ ರಸ್ತೆಗಳು ಒತ್ತುವರಿಯಾಗಿವೆ. ಎಂ.ಜಿ.ರಸ್ತೆ ಶಿರಾಣಿ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನ ಓಡಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದೆ. ಜನರ ಓಡಾಟಕ್ಕಾಗಿ ಮೀಸಲಿದ್ದ ಜಾಗದಲ್ಲಿ ವ್ಯಾಪಾರ–ವಹಿವಾಟು ನಡೆಸುತ್ತಿದ್ದಾರೆ. ಮಳಿಗೆಗಳು ಅರ್ಧ ರಸ್ತೆಯನ್ನು ಆವರಿಸಿಕೊಂಡಿವೆ.

80 ವ್ಯಾಪಾರಿಗಳು ಅತಂತ್ರ

ಕೋವಿಡ್ಗೂ ಮುನ್ನ ಎಂ.ಜಿ.ರಸ್ತೆಯಲ್ಲಿದ್ದ 80 ಬೀದಿ ಬದಿ ವ್ಯಾಪಾರಿಗಳನ್ನು ಶಿರಾಣಿ ರಸ್ತೆಗೆ ಸ್ಥಳಾಂತರಿಸಲಾಯಿತು. ಇದರಿಂದ ಈ ರಸ್ತೆಯಲ್ಲಿ ವಾಹನಗಳ ಓಡಾಟವೇ ಕಷ್ಟವಾಗಿದೆ. ‘ಮಹಾನಗರ ಪಾಲಿಕೆ ಅಧಿಕಾರಿಗಳು ಎಂ.ಜಿ.ರಸ್ತೆಯಲ್ಲಿ ಎರಡು ವ್ಯಾಪಾರಿ ವಲಯ ಮಾಡಲು ಮುಂದಾಗಿದ್ದರು. ಸ್ಮಾರ್ಟ್ ಸಿಟಿ ಮತ್ತು ಪಾಲಿಕೆಯ ಲಕ್ಷಾಂತರ ರೂಪಾಯಿ ಹಣವನ್ನು ಇದಕ್ಕಾಗಿ ವ್ಯಯಿಸಲಾಗುತ್ತಿದೆ. ಆದರೆ ವಲಯಗಳು ಈಗ ಅಕ್ರಮ ಚಟುವಟಿಕೆಗಳ ತಾಣಗಳಾಗಿ ಬದಲಾಗಿವೆ. ಕಾಮಗಾರಿ ಪೂರ್ಣಗೊಳಿಸಿ ಫುಟ್ಪಾತ್ ವ್ಯಾಪಾರಿಗಳಿಗೆ ಹಸ್ತಾಂತರಿಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ’ ಎಂದು ಫುಟ್ಪಾತ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಾಸಿಂ ಅಕ್ರಂ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಸ್ಮಾರ್ಟ್ ಸಿಟಿ ವತಿಯಿಂದ ಅನ್ಯ ಕಾರ್ಯಗಳಿಗೆ ನೂರಾರು ಕೋಟಿ ಖರ್ಚು ಮಾಡಲಾಗಿದೆ. ಇದರ ಜತೆಗೆ ಫುಟ್ಪಾತ್ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ನಾಲ್ಕು ಕಡೆಗಳಲ್ಲಿ ವ್ಯಾಪಾರ ವಲಯ ನಿರ್ಮಿಸಿದ್ದರೆ ಈಗ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಅಧಿಕಾರಿಗಳು ಎಂದಿಗೂ ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ’ ಎಂದು ದೂರುತ್ತಾರೆ.

5.55 ಲಕ್ಷ ಬೈಕ್

ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ 555531 ಬೈಕ್ಗಳು 67 ಸಾವಿರ ಕಾರುಗಳು ನೋಂದಣಿಯಾಗಿವೆ. 7164 ಪ್ಯಾಸೆಂಜರ್ ಆಟೊ 3076 ಗೂಡ್ಸ್ ಆಟೊ 14009 ಗೂಡ್ಸ್ ಲಾರಿ ಕೆಎಸ್ಆರ್ಟಿಸಿ ಖಾಸಗಿ ಮತ್ತು ಶಾಲಾ–ಕಾಲೇಜು ಬಸ್ಗಳು ಸೇರಿದಂತೆ ಒಟ್ಟು 1887 ಬಸ್ಗಳು ಓಡಾಡುತ್ತಿವೆ. 227 ಆಂಬುಲೆನ್ಸ್ಗಳು ತುರ್ತು ಸಮಯಕ್ಕೆ ಜನರಿಗೆ ಸ್ಪಂದಿಸುತ್ತಿವೆ. ಇಷ್ಟು ದೊಡ್ಡ ಸಂಖ್ಯೆಯ ವಾಹನಗಳು ಇರುವ ಕಿರಿದಾದ ರಸ್ತೆಗಳಲ್ಲೇ ಸಂಚರಿಸಬೇಕಿದೆ.

ಸಂಚಾರ ಪೊಲೀಸರಿಗೆ ಗುರಿ ನಿಗದಿ

ನಗರದ ಸಂಚಾರ ಠಾಣೆಯ ಪೊಲೀಸರು ಪ್ರತಿ ದಿನ ತಲಾ 50 ಪ್ರಕರಣ ದಾಖಲಿಸಬೇಕು ಎಂಬ ಗುರಿ ನಿಗದಿ ಪಡಿಸಲಾಗಿದೆ. ಇದು ಪೊಲೀಸರ ತಲೆನೋವಿಗೆ ಕಾರಣವಾಗಿದೆ. ಗುರಿ ತಲುಪಲೇಬೇಕು ಎಂಬ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಪೂರ್ವ ಪಶ್ಚಿಮ ಸಂಚಾರ ವಿಭಾಗಗಳಿವೆ. ಎರಡೂ ಕಡೆ ಸಿಬ್ಬಂದಿ ಕೊರತೆ ಇದೆ. ಹಲವು ವರ್ಷಗಳಿಂದ ಸಂಚಾರ ಠಾಣೆಗಳಿಗೆ ಸಿಬ್ಬಂದಿ ನಿಯೋಜಿಸಿಲ್ಲ. ಈಗ ಕೆಲಸ ಮಾಡುತ್ತಿರುವವರಿಗೆ ಕರ್ತವ್ಯದ ಒತ್ತಡ ಹೆಚ್ಚಾಗಿದೆ. ರಾತ್ರಿ ಇಡೀ ಕೆಲಸ ಮಾಡಿದವರು ಬೆಳಿಗ್ಗೆಯೂ ರಸ್ತೆಗೆ ಇಳಿಯುತ್ತಿದ್ದಾರೆ. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು 24 ಗಂಟೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.

‘ಹೆಚ್ಚಿನ ಪೊಲೀಸ್ ಸಿಬ್ಬಂದಿ 60ರ ಆಸುಪಾಸಿನಲ್ಲಿದ್ದು ತೀವ್ರ ಒತ್ತಡದಲ್ಲೇ ಇದ್ದಾರೆ. ನಿವೃತ್ತಿಯ ಸಮಯದಲ್ಲಿ ಸಮಾಧಾನ ಇಲ್ಲದಂತಾಗಿದೆ. ನಾವು ಮೇಲಧಿಕಾರಿಗಳ ಶಿಫಾರಸಿನಂತೆ ನಡೆದುಕೊಳ್ಳಬೇಕು. ಇಲ್ಲ ಎನ್ನಲು ಆಗುವುದಿಲ್ಲ. ಬೇಗ ಸೇವಾ ಅವಧಿ ಮುಗಿದರೆ ಸಾಕು ಎನ್ನುವಂತಾಗಿದೆ’ ಎಂದು ಹಿರಿಯ ಪೊಲೀಸರೊಬ್ಬರು ಅಳಲು ತೋಡಿಕೊಂಡರು. ‘ಕಳೆದ ಕೆಲ ದಿನಗಳಿಂದ ಇಂತಹ ಪದ್ಧತಿ ಜಾರಿಗೆ ತರಲಾಗಿದೆ. ಗುರಿ ನಿಗದಿಪಡಿಸಿ ಒತ್ತಡ ಹೇರುತ್ತಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುವವರು ಇದರಿಂದ ರೋಸಿ ಹೋಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.