ಭಾನುವಾರ, ಜುಲೈ 3, 2022
27 °C

ಕುಣಿಗಲ್‌: ಕದ್ದ ಹುಂಡಿ ಯಥಾಸ್ಥಿತಿಯಲ್ಲಿ ತಂದಿಟ್ಟ ಕಳ್ಳರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನ ರಂಗಸ್ವಾಮಿ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಗಳ ಎರಡು ಹುಂಡಿಗಳನ್ನು ಕದ್ದಿದ್ದ ಕಳ್ಳರು ದೇವರು ಮತ್ತು ಪೊಲೀಸರ ಭಯಕ್ಕೆ ಸೋಮವಾರ ವಾಪಸ್‌ ತಂದಿಟ್ಟಿದ್ದಾರೆ.  

ಬೆಟ್ಟದ ಮೇಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ಸೇರಿದ್ದ ಹುಂಡಿಗಳನ್ನು ಕಳ್ಳರು ಶನಿವಾರ ರಾತ್ರಿ ಕಳವು ಮಾಡಿದ್ದರು. ಸುಮಾರು₹ 2 ಲಕ್ಷವಿದ್ದ ಹುಂಡಿ ಕಳುವಾಗಿರುವ ಬಗ್ಗೆ ಧರ್ಮದರ್ಶಿ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಯಿಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಿದ್ದರು.

ಸೋಮವಾರ ಬೆಳಿಗ್ಗೆ ಎರಡೂ ಹುಂಡಿಗಳು ದೇವಾಲಯದ ಬಳಿ ಪತ್ತೆಯಾಗಿವೆ. ಕಳ್ಳರು ಹುಂಡಿಯ ಬೀಗ ತೆಗೆಯದೆ ಯಥಾಸ್ಥಿತಿಯಲ್ಲಿ ತಂದಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಹುಂಡಿಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು