ತಾಲೂಕಿನಲ್ಲಿ ಸರಾಸರಿ 21,400 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಕೈಗೊಂಡಿದ್ದು, ಆಗಸ್ಟ್ ಅಂತ್ಯಕ್ಕೆ 75 ಮಿ.ಮೀ ಮಳೆಯಾಗಬೇಕಿದೆ. ಸದ್ಯ 45ಕ್ಕೂ ಹೆಚ್ಚು ಮಿ.ಮೀ ಮಳೆಯಾಗಿದೆ. ರಾಗಿಯ ಬಿತ್ತನೆಗೆ ಸ್ವಲ್ಪ ವಿಳಂಬವಾದರೂ ಮುಂಗಾರಿನಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ತೊಂದರೆಯಾಗದಂತೆ ಕೃಷಿ ಇಲಾಖೆಯು ಎಚ್ಚರವಹಿಸಿ ತಾಲೂಕಿನ ನಾಲ್ಕು ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ರಾಗಿ ಬೀಜ ದಾಸ್ತಾನು ಮಾಡಿದೆ. ರೈತರಿಗೆ ಸಹಾಯಧನದಡಿ ಇಲಾಖೆಯಿಂದ 1,311 ಕ್ವಿಂಟಲ್ ರಾಗಿ ಬಿತ್ತನೆ ಬೀಜ ವಿತರಿಸಲಾಗಿದೆ. ರಸಗೊಬ್ಬರ ಪೂರೈಕೆಯಲ್ಲೂ ಕೊರತೆ ಆಗದಂತೆ ಎಚ್ಚರಿಕೆ ವಹಿಸಿತ್ತು.