ಅಯ್ಯನಬಾವಿಯಲ್ಲಿ ನಟ ರಾಜ್‌ಕುಮಾರ್ ಹಾಗೂ ಸ್ನೇಹಿತ ರಾಮಸ್ವಾಮಿ
ಹೆದ್ದಾರಿ ಪಕ್ಕದಲ್ಲಿನ ಅಯ್ಯನಬಾವಿ
ಯಾವುದೇ ಸುರಕ್ಷತೆಯಿಲ್ಲದ ಅಪಾಯದ ಸ್ಥಿತಿಯಲ್ಲಿರುವ ಅಯ್ಯನಬಾವಿ.

ಹೆದ್ದಾರಿ ಮೇಲ್ಸೇತುವೆ ಗ್ರಾಮದಿಂದ ದೂರದಲ್ಲಿ ನಿರ್ಮಿಸಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕೆಳಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಬಸವಯ್ಯ ಸ್ಥಳೀಯ
ಅಯ್ಯನ ಬಾವಿ ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಬೇಕಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ಅಧಿಕಾರಿಗಳ ಕಾಳಜಿಯ ಕೊರತೆಯಿಂದ ಅಪಾಯ ಎದುರಾಗಿದೆ.
ತಿಮ್ಮಯ್ಯ ಗ್ರಾಮಸ್ಥ
ಸರ್ಕಾರ ಬಾವಿಯ ಸುತ್ತ ತಂತಿ ಬೇಲಿ ಹಾಕಿಸಿ ಉದ್ಯಾನ ನಿರ್ಮಿಸಲಿ. ರಾಜ್‌ಕುಮಾರ್ ಅವರ ಪ್ರತಿಮೆ ನಿರ್ಮಿಸಿದರೆ ಉತ್ತಮ.
ನಾಗರಾಜು ನಿವೃತ್ತ ಪ್ರಾಂಶುಪಾಲ