ಗುರುವಾರ , ಜೂಲೈ 9, 2020
21 °C
ಮಾದಿಗರು- ಮತ್ತು ಛಲವಾದಿ ಜಾತಿಗಳನ್ನು ಮಾತ್ರ ಮೀಸಲಾತಿ ಅಡಿ ಪರಿಗಣಿಸಿ

‘ಸುಪ್ರೀಂ’ ಆದೇಶ ಜಾರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ಮಾದಿಗರು (ಎಡಗೈ) ಮತ್ತು ಛಲವಾದಿ (ಬಲಗೈ) ಜಾತಿಗಳನ್ನು ಮಾತ್ರ ಪರಿಶಿಷ್ಟ ಜಾತಿ ಮೀಸಲಾತಿ ಅಡಿ ಪರಿಗಣಿಸುವ೦ತೆ ಸುಪ್ರೀಂಕೋರ್ಟ್ ಆದೇಶಿಸಿದ್ದು ಇದನ್ನು ಯಥಾವತ್ ಜಾರಿಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕು ಮಾದಿಗ ದ೦ಡೋರ ಹಾಗೂ ಛಲವಾದಿ ಸಮಿತಿ ಉಪ ತಹಶೀಲ್ದಾರ್ ಮೋಹನ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಮಾದಿಗರು (ಎಡಗೈ) ಛಲವಾದಿ (ಬಲಗೈ) ಸಮುದಾಯಕ್ಕೆ ಮಾತ್ರ ಇರುವ೦ತೆ ನ್ಯಾಯಾಲಯವು ಫೆಬ್ರುವರಿಯಲ್ಲಿ ಆದೇಶಿಸಿದೆ. ಈ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರುವಂತೆ ಸಮಿತಿಯು ಸರ್ಕಾರವನ್ನು ಒತ್ತಾಯಿಸಿದೆ. ಸಮಾಜದಲ್ಲಿ ಅಸ್ಪೃಶ್ಯರಾಗಿ ಬದುಕುತ್ತಿರುವ ಈ ಎರಡು ಸಮುದಾಯಗಳನ್ನು ಮಾತ್ರ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಪರಿಗಣಿಸಬೇಕು ಎಂದು ಸಮಿತಿ ಸದಸ್ಯರು ಮನವಿ ಮಾಡಿದರು.

ಮಾದಿಗ ದಂಡೋರ ಸಮಿತಿ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ, ಯಾರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದಾರೆ ಹಾಗೂ ಆರ್ಥಿಕವಾಗಿ ಅಸ್ಪೃಶ್ಯರಾಗಿದ್ದಾರೆ ಅವರಿಗೆ ಮೀಸಲಾತಿ ಕೊಡಬಹುದು ಎಂದು ನ್ಯಾಯಾಲಯ ಹೇಳಿದೆ. ಎಸ್‌ಸಿ, ಎಸ್‌ಟಿ ಕಮಿಷನ್ ಕೂಡ ಈ ತೀರ್ಮಾನ ಮಾಡಿದೆ. ಪರಿಶಿಷ್ಟ ಜಾತಿಯಲ್ಲಿನ ಅಸ್ಪೃಶ್ಯರನ್ನು ಸೇರಿಸಿ ಅವರಿಗೆ ಮೀಸಲಾತಿ ಕೊಡಬೇಕು ಎಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ಮುಖಂಡರಾದ ಗೋ.ನಿ.ವಸಂತ್ ಕುಮಾರ್, ಜೆ.ಸಿ.ಪುರ ಗೋವಿಂದರಾಜು, ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು