ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಪರಿಹಾರ ನೀಡದ ಟೂಡ: ಪೀಠೋಪಕರಣ ಜಪ್ತಿ

Published 7 ಜುಲೈ 2024, 4:56 IST
Last Updated 7 ಜುಲೈ 2024, 4:56 IST
ಅಕ್ಷರ ಗಾತ್ರ

ತುಮಕೂರು: ನಗರ ಹೊರವಲಯದ ರಿಂಗ್‌ ರಸ್ತೆಗಾಗಿ ಭೂಮಿ ಸ್ವಾಧೀನ ಪಡಿಸಿಕೊಂಡು ಸೂಕ್ತ ಪರಿಹಾರ ನೀಡದ ಕಾರಣ, ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಪೀಠೋಪಕರಣಗಳನ್ನು ಶನಿವಾರ ಜಪ್ತಿ ಮಾಡಲಾಯಿತು.

‘ಭೂಮಿ ಪಡೆದುಕೊಂಡು ಕಡಿಮೆ ಪರಿಹಾರ ಕೊಡಲಾಗಿದೆ. ಸೂಕ್ತ ಪರಿಹಾರ ವಿತರಿಸಬೇಕು’ ಎಂದು ಕ್ಯಾತ್ಸಂದ್ರದ ಗಂಗಣ್ಣ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು. ಗಂಗಣ್ಣ ಅವರಿಗೆ ₹82 ಲಕ್ಷ ಪರಿಹಾರ ನೀಡುವಂತೆ 2019ರಲ್ಲಿ ಕೋರ್ಟ್‌ ಆದೇಶಿಸಿತ್ತು. ಆದೇಶ ನೀಡಿ ಆರು ವರ್ಷ ಕಳೆದರೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರ ವಿತರಣೆಯಾಗಿಲ್ಲ.

ಹಿರಿಯ ವಕೀಲರಾದ ಪಿ.ಆರ್.ಜಯರಂಗಯ್ಯ, ಎಚ್‌.ಆರ್‌.ಕಾಂತರಾಜು ನೇತೃತ್ವದಲ್ಲಿ ಕೋರ್ಟ್‌ ಸಿಬ್ಬಂದಿ ಟೂಡಾ ಕಚೇರಿಗೆ ಭೇಟಿ ನೀಡಿ ಕುರ್ಚಿ, ಟೇಬಲ್‌ ಹಾಗೂ ಸೋಫಾ ಸೇರಿ ಇತರೆ ಪೀಠೋಪಕರಣ ಜಪ್ತಿ ಮಾಡಿದರು. 36 ಗುಂಟೆ ಜಮೀನನ್ನು ಟೂಡ ಭೂಸ್ವಾಧೀನ ಪಡಿಸಿಕೊಂಡು ₹5 ಲಕ್ಷ ಪರಿಹಾರ ನೀಡಿತ್ತು. ಹೆಚ್ಚಿನ ಪರಿಹಾರ ಕೋರಿ ಗಂಗಣ್ಣ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT