ತುಮಕೂರು: ಸಂಚಾರ ನಿಯಮ ಪಾಲನೆಗೆ ಉದಾಸೀನ; 5 ವರ್ಷದಲ್ಲಿ 9.49 ಲಕ್ಷ ಪ್ರಕರಣ
5 ವರ್ಷದಲ್ಲಿ 9.49 ಲಕ್ಷ ಪ್ರಕರಣ; ₹36.56 ಕೋಟಿ ದಂಡ ವಸೂಲಿ
ಮೈಲಾರಿ ಲಿಂಗಪ್ಪ
Published : 3 ಡಿಸೆಂಬರ್ 2025, 6:44 IST
Last Updated : 3 ಡಿಸೆಂಬರ್ 2025, 6:44 IST
ಫಾಲೋ ಮಾಡಿ
Comments
ಸಿಬ್ಬಂದಿ ಕೊರತೆ
ನಗರದಲ್ಲಿ ಪೂರ್ವ, ಪಶ್ಚಿಮ ಸಂಚಾರ ಠಾಣೆಗಳಿವೆ. ಎರಡೂ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಹಲವು ವರ್ಷಗಳಿಂದ ಈ ಠಾಣೆಗಳಿಗೆ ಸಿಬ್ಬಂದಿ ನಿಯೋಜಿಸಿಲ್ಲ. ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಒತ್ತಡ ಹೆಚ್ಚಾಗಿದೆ. ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸಂಚಾರ ನಿಯಮ ಪಾಲನೆ ಕುರಿತು ಶಾಲಾ–ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ. ದಂಡ ವಸೂಲಿ ಜಾಸ್ತಿಯಾದಂತೆಲ್ಲ ನಿಯಮ ಪಾಲನೆ ಹೆಚ್ಚಾಗುತ್ತಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ.