ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ’

Last Updated 4 ಜನವರಿ 2021, 3:34 IST
ಅಕ್ಷರ ಗಾತ್ರ

ತುಮಕೂರು: ‘ನಿಮ್ಮ ಗ್ರಾಮದ ಸಮಸ್ಯೆಗಳನ್ನು ನೀವೇ ಪಟ್ಟಿ ಮಾಡಿ. ಬೀದಿ ದೀಪ, ಚರಂಡಿ, ರಸ್ತೆ, ನಿವೇಶನ, ವಸತಿ ಬಗ್ಗೆ ಪ್ರಮುಖವಾಗಿ ಗಮನವಹಿಸಬೇಕು ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಿಪಿಐ ಬೆಂಬಲದಿಂದ ಗೆಲುವು ಸಾಧಿಸಿದವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘‌ಗೆಲುವು ಸಾಧಿಸಿದವರು ಪಕ್ಷದ ಹೆಜ್ಜೆಯನ್ನು ಮರೆಯಾದಂತೆ ಕೆಲಸ ಮಾಡಬೇಕು. ನಿಮ್ಮ ಜತೆ ನಾವು ಇದ್ದೇವೆ ಎನ್ನುವ ಭರವಸೆಯನ್ನು ಜನರಲ್ಲಿ ಮೂಡಿಸಬೇಕು. ಬೇರೆ ಪಕ್ಷಹಳ ಹಣದ ಬೇಡಿಕೆಯನ್ನು ತಿರಸ್ಕರಿಸಿ ಪ್ರಾಮಾಣಿಕವಾಗಿ ಕೆಲಸಮಾಡಬೇಕು. ತುಮಕೂರಿನಲ್ಲಿ ಮುಂದಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಬೇಕು’ ಎಂದು ಸಲಹೆ ನೀಡಿದರು.

ಎಐಟಿಯುಸಿ ರಾಜ್ಯ ಸಮಿತಿ ಸದಸ್ಯ ಎನ್.ಶಿವಣ್ಣ, ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ ಮಾತನಾಡಿದರು. ‌

ಪಕ್ಷದ ಜಿಲ್ಲಾ ಖಜಾಂಚಿ ಕಂಬೇಗೌಡ, ಎಐಎಸ್‍ಎಪ್ ಜಿಲ್ಲಾ ಸಂಚಾಲಕ ‌ಚಂದ್ರಶೇಖರ್, ಸಹಕಾರ್ಯದರ್ಶಿ ಕಾಂತರಾಜ್, ಶಿರಾ ತಾಲ್ಲೂಕು ಕಾರ್ಯದರ್ಶಿ ಭೂತರಾಜ್ ಇದ್ದರು.

ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರತ್ನಮ್ಮ, ಮರಿಯಪ್ಪ, ಕರೀಮ್‍ಸಾಬ್, ರಮ್ಯಾ, ಚಿಕ್ಕಣ, ನಂಜುಂಡಪ್ಪ, ಕೆ.ಸಿ.ಬಸವರಾಜು, ಬಸವಲಿಂಗಪ್ಪ, ಚಂದ್ರಯ್ಯ, ಟಿ.ರಾಧಾ, ಪಿ.ವಿ.ರಂಗಸ್ವಾಮಿ, ಮಂಜುಳಾ, ನರಸಿಂಹಮೂರ್ತಿ, ತಿಪ್ಪನಹಳ್ಳಿ ದೊಡ್ಡಲಿಂಗಯ್ಯ, ಅಜ್ಜೇನಹಳ್ಳಿ ಕಾಂತರಾಜು, ಶಿರದಡು ಶಂಭಣ್ಣ, ಶಿವರುದ್ರಪ್ಪ, ಪಾವಗಡ ರಾಮಕೃಷ್ಣ, ಅಂಜನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT