ತುಮಕೂರಿನ ಮಂಡಿಪೇಟೆ ರಸ್ತೆಯಲ್ಲಿ ಗುಂಡಿಗಳು
ತುಮಕೂರಿನ ಮಂಡಿಪೇಟೆ ರಸ್ತೆ ಅಗೆದು ಅರ್ಧ ಮುಚ್ಚಿರುವುದು
ಬೆಳಗುಂಬ ರಸ್ತೆಯಲ್ಲಿ ಗುಂಡಿಗೆ ಬ್ಯಾರಿಕೇಡ್ ಅಡ್ಡ ಇಟ್ಟಿರುವುದು

ಮಂಡಿಪೇಟೆ ರಸ್ತೆಯಲ್ಲಿ ಸೂಕ್ತ ಚರಂಡಿ ಇಲ್ಲ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲಿ ನಿಲ್ಲುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ. ಮಹಾನಗರ ಪಾಲಿಕೆಯ ಯಾರೊಬ್ಬರೂ ಇತ್ತ ಬಂದು ಪರಿಶೀಲನೆ ನಡೆಸಿ ಅಭಿವೃದ್ಧಿಯ ಮಾತು ಆಡುತ್ತಿಲ್ಲ. ಪ್ರತಿ ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲೇ ಸಂಚರಿಸುತ್ತಿವೆ.
ಅಮ್ಜದ್ ಮಂಡಿಪೇಟೆ
ಹಂಪ್ಸ್ ಇಲ್ಲ ನಗರದ ಪ್ರಮುಖ ರಸ್ತೆಗಳಿಗೆ ಹಂಪ್ಸ್ ಹಾಕಿಲ್ಲ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ವೃತ್ತಗಳಲ್ಲಿ ಅಡ್ಡ ರಸ್ತೆಗಳಲ್ಲಿ ವಾಹನಗಳು ನಿಯಂತ್ರಣ ತಪ್ಪಿ ಮುಖಾಮುಖಿಯಾಗುತ್ತಿವೆ. ವಾರ್ಡ್ ಸದಸ್ಯರು ಪಾಲಿಕೆಯ ಎಂಜಿನಿಯರ್‌ಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಓಂಕಾರಮೂರ್ತಿ ಅಧ್ಯಕ್ಷ ಆಟೊ ನಿಲ್ದಾಣ 
ಈ ಹಿಂದೆ ಕುಣಿಗಲ್ ರಸ್ತೆಯಲ್ಲಿ ಬರೀ ಗುಂಡಿಗಳಿದ್ದವು. ಪಾಲಿಕೆಯಿಂದ ರಸ್ತೆ ಅಭಿವೃದ್ಧಿ ಪಡಿಸಲಾಯಿತು. ಆದರೆ ಕೆಲವೇ ದಿನಗಳಿಗೆ ಮತ್ತೆ ಹಳೆಯ ಮಾದರಿಗೆ ಬಂದಿದೆ. ರೈಲ್ವೆ ಕೆಳ ಸೇತುವೆ ಬಳಿ ಪೂರ್ತಿಯಾಗಿ ಗುಂಡಿಗಳಿಂದ ತುಂಬಿಕೊಂಡಿದೆ. ಕನಿಷ್ಠ ಮಣ್ಣು ಡಾಂಬಾರು ಹಾಕಿ ಮುಚ್ಚುವ ಕೆಲಸವಾಗಿಲ್ಲ.
ರಾಮಚಂದ್ರ ಆಟೊ ಚಾಲಕ
ಅಮರಜ್ಯೋತಿ ನಗರದ ಮುಖ್ಯರಸ್ತೆಯಲ್ಲಿ ಮಳೆ ಬಂದರೆ ಓಡಾಟವೇ ಕಷ್ಟವಾಗುತ್ತಿದೆ. ಕೆಸರು ಗದ್ದೆಯಂತೆ ನಿರ್ಮಾಣವಾಗುತ್ತದೆ. ರಸ್ತೆ ಅಗೆದು ಹಾಗೆ ಬಿಟ್ಟಿದ್ದರ ಪರಿಣಾಮ ಹೆಚ್ಚಿನ ಸಮಸ್ಯೆಯಾಗುತ್ತಿದೆ.
ಜಯರಾಮಯ್ಯ ಆಟೊ ಚಾಲಕ