ಶಿರಾ: ನಗರದ ಅಂಬೇಡ್ಕರ್ ಕಾಲೊನಿ ನಿವಾಸಿಗಳಿಗೆ ಅ.2ರಂದು ನಿವೇಶನದ ಹಕ್ಕುಪತ್ರ ಹಾಗೂ ಇ–ಖಾತೆ ವಿತರಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಜೀಷಾನ್ ಮಹಮೂದ್ ಹೇಳಿದರು.

ನಗರಸಭೆ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು. ಅಂಬೇಡ್ಕರ್ ಕಾಲೊನಿಯಲ್ಲಿ 90 ನಿವೇಶನ ವಿತರಿಸಲು ಮಂಜೂರಾತಿ ದೊರೆತಿದೆ. ಅದರಲ್ಲಿ 78ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ನಿವೇಶನ ಮತ್ತು ಇ-ಖಾತೆ ಹಕ್ಕುಪತ್ರ ನೀಡಲಾಗುವುದು ಎಂದರು.

ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದಾಗಿದೆ. ನಗರದ ಸ್ವಚ್ಛತೆ ಕಾಪಾಡುವ ಅವರ ನೋವಿಗೆ ಸ್ವಂದಿಸುವ ಕೆಲಸ ಮಾಡಲಾಗುವುದು. ಶೀಘ್ರವಾಗಿ ಪೌರಕಾರ್ಮಿಕರಿಗೆ ನಿವೇಶನ ವಿತರಿಸಲಾಗುವುದು ಎಂದರು.

ಕಚೇರಿ ಉದ್ಘಾಟನೆ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕೊಠಡಿಯನ್ನು ಶಾಸಕ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು.

ಪೌರಾಯುಕ್ತ ರುದ್ರೇಶ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಸದಸ್ಯರಾದ ಮಹಮದ್ ಜಾಫರ್, ಅಜೇಯ್ ಕುಮಾರ್, ಎಸ್.ಎಲ್.ರಂಗನಾಥ್, ಬುರ್ಹಾನ್ ಮಹಮೂದ್, ಇರ್ಷಾದ್ ಪಾಷ, ಮಜರ್, ಖಾದರ್, ಮಹೇಶ್ ಕುಮಾರ್, ಸುಶೀಲಾ ವಿರೂಪಾಕ್ಷ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ನೂರುದ್ದೀನ್, ಎಚ್.ಎಲ್.ರಂಗನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.