ಪಾಲಿಕೆಯಲ್ಲಿ ಮಧ್ಯವರ್ತಿ ಹಾವಳಿ
ಮಹಾನಗರ ಪಾಲಿಕೆಯಲ್ಲಿ ಇ–ಖಾತೆ ಮಾಡಿಕೊಡಲು ಜನರನ್ನು ಅಲೆಸಲಾಗುತ್ತಿದೆ. ಮಧ್ಯವರ್ತಿಗಳಿಗೆ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ. ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ ಎಂದು ಜ್ಯೋತಿಗಣೇಶ್ ಆಕ್ರೋಶ ವ್ಯಕ್ತಪಡಿಸಿದರು. ಎಷ್ಟು ಹೇಳಿದರೂ ಪಾಲಿಕೆ ಅಧಿಕಾರಿಗಳು ಕೇಳುತ್ತಿಲ್ಲ. ಜನರನ್ನು ಗೋಳಾಡಿಸುವುದು ತಪ್ಪಿಲ್ಲ. ಮೊದಲು ಮಧ್ಯವರ್ತಿಗಳ ಕಾಟ ತಪ್ಪಿಸಿ ಜನರ ಕೆಲಸ ಮಾಡಿಕೊಡುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.