ತುರುವೇಕೆರೆ: ರೈತರಿಂದ ಬೆಂಬಲ ಬೆಲೆಯಡಿ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತೆರೆಯಲಾಗಿದ್ದ ನಾಫೆಡ್ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿಸುತ್ತಿದ್ದ ಪ್ರಕ್ರಿಯೆ ಭಾಗಶಃ ಕೊನೆಗೊಂಡಿದೆ.

ತಾಲ್ಲೂಕಿನ ಮಾಯಸಂದ್ರ, ದಬ್ಬೇಘಟ್ಟ, ಕಸಬಾ ಮತ್ತು ದಂಡಿನಶಿವರ ಹೋಬಳಿಯ 9,012 ರೈತರು ಜನವರಿಯಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ್ದರು. ಇದೇ ರೈತರಿಂದ 1,33,250 ಕ್ವಿಂಟಲ್ ರಾಗಿ ಖರೀದಿ ಗುರಿ ಹೊಂದಲಾಗಿತ್ತು. ಆರಂಭದಲ್ಲಿ 20 ಕ್ವಿಂಟಲ್ ಪ್ರತಿ ರೈತರು ರಾಗಿ ಮಾರುವ ಅವಕಾಶ ನೀಡಲಾಗಿತ್ತು. ನಂತರ ಹೆಚ್ಚುವರಿಯಾಗಿ 10 ಕ್ವಿಂಟಲ್ ರಾಗಿ ಮಾರುವ ಅವಕಾಶ ಕಲ್ಪಿಸಲಾಗಿತ್ತು.

ಇಲ್ಲಿವರೆಗೆ 7,409 ರೈತರಿಂದ 1,21,418 ಕ್ವಿಂಟಲ್ ರಾಗಿ ಖರೀದಿ ಮಾಡಲಾಗಿದೆ. ರಾಗಿ ನೀಡಿದ 4,500 ರೈತರಿಗೆ ವಿವಿಧ ಹಂತಗಳಲ್ಲಿ ಖಾತೆಗೆ ಹಣ ಜಮಾ ಆಗಿದೆ. 2,909 ರೈತರಿಗೆ ಬಾಕಿ ಹಣ ಬಿಡುಗಡೆಯಾಗಬೇಕಿದೆ. ಜೂನ್ 28ರವರೆಗೆ ರಾಗಿ ಕೇಂದ್ರ ತೆರೆದಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.