ಕೊಡಿಗೇನಹಳ್ಳಿ: ‘ವಿಕಸಿತ ಭಾರತಕ್ಕಾಗಿ ನರೇಂದ್ರ ಮೋದಿ ಸಾರಥ್ಯ ಅನಿವಾರ್ಯ’ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿ ಮಾತನಾಡಿದರು.

ದೇಶದ ಎಲ್ಲ ರಾಜ್ಯದ ಜನರು, ರೈತರು ಒಟ್ಟಾಗಲು, ನದಿ ಜೋಡಣೆಯಂತಹ ಮಹತ್ವದ ಕಾರ್ಯಕ್ಕೆ ಮುನ್ನುಡಿ ಬರೆದ ಮಹಾತ್ಮ ವಾಜಪೇಯಿ. ಅವರ ಮಾರ್ಗದರ್ಶನ ಈ ದೇಶಕ್ಕೆ ಅಗತ್ಯವಾಗಿದ್ದು ಅದರಂತೆ ನರೇಂದ್ರ ಮೋದಿ ಸರ್ಕಾರ ನಡೆಯುತ್ತಿದೆ. ಬರಪೀಡಿತ ಮಧುಗಿರಿ, ಕೊರಟಗೆರೆ ಎರಡು ಕಣ್ಣುಗಳಂತಿದ್ದು, ಈ ಕ್ಷೇತ್ರದ ರೈತರ ಅಭಿವೃದ್ಧಿಗೆ ಹೆಚ್ಚು ಅದ್ಯತೆ ನೀಡಲಾಗಿದೆ ಎಂದರು.

ಮಧುಗಿರಿ ಕೈಗಾರಿಕಾ ಪ್ರದೇಶಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡಿದ್ದು, ಸರ್ಕಾರ ಕಡಿಮೆ ಹಣ ನೀಡಲು ಮುಂದಾಗಿದೆ. ಆದರೆ ₹17 ಲಕ್ಷದಿಂದ ₹22 ಲಕ್ಷಕ್ಕೆ ಏರಿಸಿದರೆ ರೈತರು ಭೂಮಿ ನೀಡಬಹುದು ಎಂದು ಹೇಳಿದ್ದೇನೆ ಎಂದರು. ಆದರೆ ಅದಕ್ಕೆ ಅಲ್ಲೇ ಕುಳಿತಿದ್ದ ಸ್ಥಳೀಯ ರೈತರು ಒಪ್ಪಲಿಲ್ಲ.

ಎಲ್.ಸಿ. ನಾಗರಾಜು, ಪುರವರ ಮೂರ್ತಿ, ಕೊಂಡವಾಡಿ ಚಂದ್ರಶೇಖರ್, ಬಿ ಕೆ ಮಂಜುನಾಥ್, ಚಿಕ್ಕೋಬರೆಡ್ಡಿ, ಎಸ್.ಡಿ. ಕೃಷ್ಣಪ್ಪ, ಎಂ.ಆರ್. ಜಗನ್ನಾಥ್, ಗಂಗರಾಜು, ನೀರಗಲ್ಲು, ರಾಮಕೃಷ್ಣಪ್ಪ, ಶ್ರೀನಿವಾಸ್, ಆರ್. ವೆಂಕಟೇಶ್, ಅಶ್ವತ್ಥನಾರಾಯಣ, ಲಕ್ಷ್ಮಿಪತಿ, ಶಿವಲಿಂಗಯ್ಯ, ರಾಜಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.