ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಮಹಾನಗರ ಪಾಲಿಕೆ ಅತಂತ್ರ, ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ

Last Updated 3 ಸೆಪ್ಟೆಂಬರ್ 2018, 5:58 IST
ಅಕ್ಷರ ಗಾತ್ರ

ತುಮಕೂರು:ಮಹಾನಗರಪಾಲಿಕೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗಳಿಸುವುದರೊಂದಿಗೆ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಅದರೆ ಯಾವುದೇ ಪಕ್ಷ ಬಹುಮತ ಗಳಿಸುವಲ್ಲಿ ವಿಫಲವಾಗಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಒಟ್ಟು 35 ವಾರ್ಡ್‌ಗಳಿಗೆ ಚುನಾವಣೆ ನಡೆಯಿತು.ಬಿಜೆಪಿ 12, ಜೆಡಿಎಸ್ 10 ಮತ್ತುಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.ಪಕ್ಷೇತರರು ಮೂರು ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಪಾಲಿಕೆಯಲ್ಲಿ ಸ್ವತಂತ್ರವಾಗಿ ಅಧಿಕಾರ ನಡೆಸಲು 18 ಸ್ಥಾನ ಅಗತ್ಯವಿದೆ.ಹಿಂದಿನಂತೆಯೇ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಆಡಳಿತ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. 1994ರಿಂದಲೂ ತುಮಕೂರು ನಗರದ ಆಡಳಿತದಲ್ಲಿ ಮೈತ್ರಿ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾನವಾಗಿದೆ.

ಇದು ಮಹಾನಗರಪಾಲಿಕೆಗೆ ನಡೆದ ಮೊದಲು ಚುನಾವಣೆ. 2014ರಲ್ಲಿ ತುಮಕೂರು ನಗರಸಭೆಯಿಂದ ಮಹಾನಗರಪಾಲಿಕೆಯಾಗಿತ್ತು. ಆದರೆ ಆ ವೇಳೆಗೆ ನಗರಸಭೆ ಚುನಾವಣೆ ನಡೆದು, ಸದಸ್ಯರು ಆಯ್ಕೆಯಾಗಿದ್ದ ಕಾರಣ ಮರುಚುನಾವಣೆನಡೆಸಿರಲಿಲ್ಲ.

ಜಿಲ್ಲೆಯಗುಬ್ಬಿ ಮತ್ತು ಕೊರಟಗೆರೆ ಪಟ್ಟಣ ಪಂಚಾಯಿತಿ, ಮಧುಗಿರಿ ಮತ್ತು ಚಿಕ್ಕನಾಯಕನಹಳ್ಳಿ ಪುರಸಭೆಯ ಫಲಿತಾಂಶ ಪೂರ್ಣವಾಗಿ ಹೊರಬಿದ್ದಿದೆ. ಜೆಡಿಎಸ್‌ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿದೆ.

ಕೊರಟಗೆರೆಯಲ್ಲಿ ಪರಮೇಶ್ವರ್‌ಗೆ ಮುಖಭಂಗ

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.ಶಾಸಕರು ಮತ್ತು ಸಂಸದರ ಮತ ಸೇರಿದರೆ ಕಾಂಗ್ರೆಸ್‌ಗೆ 7 ಸ್ಥಾನ ದೊರೆಯಲಿವೆ. ಪಕ್ಷೇತರವಾಗಿ ಗೆಲುವು ಕಂಡ ನಟರಾಜ್ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರು. ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರು ಕಾಂಗ್ರೆಸ್ ಬೆಂಬಲಿಸುವ ವದಂತಿಗಳಿವೆ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲವಾಗಲಿದ್ದು, ಬಿಜೆಪಿ ಅಭ್ಯರ್ಥಿಯ ನಡೆಯ ಮೇಲೆ ಗದ್ದುಗೆ ಏರುವ ಆಟ ನಿಂತಿದೆ. ಕಳೆದ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.

ಒಟ್ಟು 15 ಸ್ಥಾನ: ಜೆಡಿಎಸ್ 8; ಕಾಂಗ್ರೆಸ್ 5; ಒಂದು ಬಿಜೆಪಿ 1; ಒಂದು ಪಕ್ಷೇತರ 1

ಗುಬ್ಬಿಯಲ್ಲಿಅಧಿಕಾರ ಉಳಿಸಿಕೊಂಡ ಜೆಡಿಎಸ್‌

ಸಚಿವ ಶ್ರೀನಿವಾಸ್ ಪಟ್ಟಣ ಪಂಚಾಯಿತಿ ಮೇಲಿನ ಹಿಡಿತವನ್ನು ಕಳೆದುಕೊಂಡಿಲ್ಲ. ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಂದಿನಿಂದಲೂ ಜೆಡಿಎಸ್‌ ಅಧಿಕಾರ ಹಿಡಿಯುತ್ತಿದೆ. ಒಟ್ಟು ಸ್ಥಾನ 19: ಜೆಡಿಎಸ್ 10, ಬಿಜೆಪಿ 6, ಕಾಂಗ್ರೆಸ್ 2, ಪಕ್ಷೇತರ 1

ಮಧುಗಿರಿಯಲ್ಲಿ ಬಿಜೆಪಿ ಶೂನ್ಯ ಸಂಪಾದನೆ

ಕೆ.ಎನ್.ರಾಜಣ್ಣ ಮತ್ತು ಡಾ.ಜಿ.ಪರಮೇಶ್ವರ್ ಹಗ್ಗಜಗ್ಗಾಟದಿಂದ ಮಧುಗಿರಿಯಲ್ಲಿ ಕಾಂಗ್ರೆಸ್‌ ಸಾಧನೆಯ ಬಗ್ಗೆ ಪ್ರಶ್ನೆಗಳಿದ್ದವು. 23 ಸದಸ್ಯಬಲದ ಪುರಸಭೆಯಲ್ಲಿ ಕಾಂಗ್ರೆಸ್ 13 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಜೆಡಿಎಸ್ 9, ಪಕ್ಷೇತರ 1. ಇಲ್ಲಿ ಬಿಜೆಪಿ ಖಾತೆ ತೆರೆದಿಲ್ಲ.

ಚಿಕ್ಕನಾಯಕನಹಳ್ಳಿ ಪುರಸಭೆ; ಜೆಡಿಎಸ್‌ ಅಧಿಕಾರಕ್ಕೆ

ಒಟ್ಟು 23 ವಾರ್ಡ್‌ಗಳ ಪೈಕಿ ಜೆಡಿಎಸ್ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್ 2, ಬಿಜೆಪಿ 5, ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ತುಮಕೂರು ಮಹಾನಗರಪಾಲಿಕೆಯಲ್ಲಿ ಜಯಗಳಿಸಿದ ನಯಾಜ್ ಅವರ ಸಂಭ್ರಮ (ಚಿತ್ರ: ರಾಮರೆಡ್ಡಿ ಅಳವಂಡಿ)
ತುಮಕೂರು ಮಹಾನಗರಪಾಲಿಕೆಯಲ್ಲಿ ಜಯಗಳಿಸಿದ ನಯಾಜ್ ಅವರ ಸಂಭ್ರಮ (ಚಿತ್ರ: ರಾಮರೆಡ್ಡಿ ಅಳವಂಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT