ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ| ಕಾಲುಬಾಯಿ ಜ್ವರ ಲಸಿಕಾ ಅಭಿಯಾನಕ್ಕೆ‌ ಚಾಲನೆ

Published 26 ಸೆಪ್ಟೆಂಬರ್ 2023, 14:08 IST
Last Updated 26 ಸೆಪ್ಟೆಂಬರ್ 2023, 14:08 IST
ಅಕ್ಷರ ಗಾತ್ರ

ಶಿರಾ: ರೈತರು ಕೃಷಿ ಜೊತೆಗೆ ಹೈನುಗಾರಿಕೆ, ಕುರಿ ಸಾಕಾಣಿಕೆ ಮಾಡುವುದರಿಂದ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.

ತಾಲ್ಲೂಕಿನ ಭೂವನಹಳ್ಳಿಯಲ್ಲಿ ಮಂಗಳವಾರ ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ನಡೆದ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಮೂರು ಪಶು ಆಸ್ಪತ್ರೆ, ಮೂರು ಪಶು ಚಿಕಿತ್ಸಾಲಯ ಹಾಗೂ ಮೂರು ಪ್ರಾಥಮಿಕ ಪಶು ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು.

ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್.ರಮೇಶ್ ಮಾತನಾಡಿ, ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಬೇಕು. ಇಲ್ಲವಾದಲ್ಲಿ ಜಾನುವಾರು ಸಾಯುವ ಸಾಧ್ಯತೆ ಇದೆ. ರೋಗದಿಂದ ಗುಣವಾದರೂ ಹಾಲು ನೀಡುವುದಿಲ್ಲ ಎಂದರು.

ಭೂವನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಮಂಜುಳ ಕೆ.ಸಣ್ಣ ನಿಂಗಯ್ಯ, ಉಪಾಧ್ಯಕ್ಷ ಎಂ.ಎಸ್.ಮುರುಳಿ, ಮುಖಂಡರಾದ ಜನಾರ್ಧನ್, ನರೇಶ್ ಗೌಡ, ಭದ್ರೇಶ್, ಭೂವನಹಳ್ಳಿ ಕಿಟ್ಟಿ, ಪಶು ವೈದ್ಯಾಧಿಕಾರಿ ಎ.ಅರ್. ರಮೇಶ್, ದೇವರಾಜ್, ನಳಿನಾಕ್ಷಿ, ವಸಂತ್, ನಂದೀಶ್ ಕುಮಾರ್, ವಿನೋದ್, ಶಾಂತಲಾ, ನವೀನ್, ಸರೋಜಾ, ಚೇತನ್ ಕುಮಾರ್, ಭೂತೇಶ್, ಹಾಲು ಉತ್ಪಾದಕರ ಸಂಘದ ಶ್ರೀನಿವಾಸ್, ಶಶಿಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT