ಗುರುವಾರ , ಏಪ್ರಿಲ್ 9, 2020
19 °C

ವಚನಕಾರರು ನೊಂದವರ ಧ್ವನಿ: ರೂಪಾ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸ್ಥಾವರವಾಗಿದ್ದ ಸಮಾಜವನ್ನು ಜಂಗಮ ಲೋಕವಾಗಿ ಮಾಡಿದವರು ಹನ್ನೆರಡನೇ ಶತಮಾನದ ವಚನಕಾರರು ಎಂದು ಶರಣು ವಿಶ್ವವಚನ ಪ್ರತಿಷ್ಠಾನದ ಸಂಸ್ಥಾಪಕ ನಿರ್ದೇಶಕಿ ರೂಪಾ ಕುಮಾರಸ್ವಾಮಿ ಹೇಳಿದರು.

ಶರಣು ವಿಶ್ವವಚನ ಪ್ರತಿಷ್ಠಾನವು ಕುಣಿಗಲ್ ತಾಲ್ಲೂಕಿನ ಕಗ್ಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ’ದಲ್ಲಿ ಮಾತನಾಡಿದರು.

ವಚನಕಾರರು ನೊಂದವರಿಗೆ ಧ್ವನಿ ನೀಡಿದರು. ಆತ್ಮ ಕಲ್ಯಾಣದ ಜತೆಗೆ ಲೋಕ ಕಲ್ಯಾಣ ಸಾಧಿಸಿದರು. ಕಾಯಕದಲ್ಲಿಯೇ ಶಿವನನ್ನು ಕಾಣುವ ಮಹತ್ವವಾದ ಅಂಶ ತಿಳಿಸಿಕೊಟ್ಟರು. ದೇವರ ಸಾಕ್ಷಾತ್ಕಾರ ಪಡೆಯುವುದು ದುರ್ಲಭ ಎಂದುಕೊಂಡಿದ್ದ ಕಾಲದಲ್ಲಿ ಸರಳ ವಚನಗಳ ಮೂಲಕ ಸಾಮಾನ್ಯರೂ ಕೂಡಾ ದೇವರ ಕೃಪೆಗೆ ಪಾತ್ರರಾಗಬಹುದು ಎಂಬುದನ್ನು ವಚನ ಕ್ರಾಂತಿಯ ಮೂಲಕ ತೋರಿಸಿಕೊಟ್ಟರು ಎಂದರು.

ಪ್ರತಿಷ್ಠಾನದ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಶಿವನು ನಾದಪ್ರಿಯನಲ್ಲ, ವೇದಪ್ರಿಯನಲ್ಲ ಭಕ್ತಿಪ್ರಿಯ ಎಂದು ತೋರಿಸಿಕೊಟ್ಟ ಬಸವಣ್ಣನವರ ತತ್ವಕ್ಕೆ ವಿಶ್ವವೇ ತಲೆದೂಗುತ್ತಿದೆ. ಇದಕ್ಕೆ ಲಂಡನ್‍ನಲ್ಲಿ ಸ್ಥಾಪಿಸಿರುವ ಬಸವ ಪುತ್ಥಳಿಯೇ ಉದಾಹರಣೆ. ಸ್ತ್ರೀಸಮಾನತೆಯ ಅಡಿಗಲ್ಲನ್ನು ಸುಂದರ ಕಟ್ಟಡವನ್ನಾಗಿ ನಿರ್ಮಾಣ ಮಾಡಿದ ಅಗ್ಗಳಿಕೆ ಶರಣರದ್ದು ಎಂದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕಿ ಶೈಲಜಾ, ಮುಖ್ಯಶಿಕ್ಷಕಿ ಸುಶೀಲಮ್ಮ, ಶಿಕ್ಷಕರಾದ ಶಾರದಮ್ಮ, ಹೊನ್ನಮ್ಮ, ವರಲಕ್ಷ್ಮಿ, ಗಿರಿಜೇಶ್, ವಚನ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)