ತುಮಕೂರು: ಕರಾವಳಿಯಲ್ಲಿ ಯಕ್ಷಗಾನ ರೂಪದಲ್ಲಿ ಬಯಲಾಟ ವಿಜೃಂಭಿಸುತ್ತಿದೆ. ಸರ್ಕಾರದ ಪ್ರಶಸ್ತಿ, ಪುರಸ್ಕಾರ ಅವರಿಗೆ ಮಾತ್ರ ಲಭ್ಯವಾಗುತ್ತಿವೆ. ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಲೇಖಕ ಎಸ್.ನಟರಾಜ ಬೂದಾಳು ವಿಷಾದಿಸಿದರು.

ನಗರದಲ್ಲಿ ಬುಧವಾರ ಬಯಲಾಟ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿರುವ ಮೂರು ದಿನಗಳ ಮೂಡಲಪಾಯ ಬಯಲಾಟ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆ ಮೂಡಲಪಾಯ ಬಯಲಾಟದ ತವರು. ಇಪ್ಪತ್ತೆರಡು ಕಥೆಗಳ ಮೂಲಕ ಕಲಾವಿದರು ರಂಜಿಸುತ್ತಿದ್ದರು. ಪ್ರಸ್ತುತ ಕೇವಲ ಎರಡು ಕಥೆಗಳು ನಮ್ಮ ಸಮಾಜವನ್ನು ನಿಯಂತ್ರಿಸುತ್ತಿವೆ. ಇಂತಹ ಸಾಂಸ್ಕೃತಿಕ ರಾಜಕಾರಣದಲ್ಲಿ ಗ್ರಾಮೀಣ ಪ್ರದೇಶದ ಬಯಲಾಟ ಕಲಾವಿದರ ಗೋಳು ಹೇಳತೀರದಾಗಿದೆ ಎಂದರು.

ಕಥೆಗಾರ ತುಂಬಾಡಿ ರಾಮಯ್ಯ, ‘ಬಯಲಾಟ ಸಂಸ್ಕೃತಿಯ ಅವಿಭಾಜ್ಯ ಅಂಗ. ಕಲೆ ನಂಬಿ ಬದುಕು ಸಾಗಿಸುತ್ತಿರುವ ಕಲಾವಿದರಿಗೆ ನೆಮ್ಮದಿ ಸಿಗಬೇಕು. ಶಾಲಾ–ಕಾಲೇಜು ವಿದ್ಯಾರ್ಥಿಗಳು ಬಯಲಾಟ ಕಲಿತರೆ, ಕಲೆ ಉಳಿಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ್, ‘ರಾಮ ಎಂದರೆ ಬಿಲ್ಲು, ಬಾಣ ಮತ್ತು ಅವನ ಪರಿವಾರದ ಚಿತ್ರ ನೆನಪಿಗೆ ಬರುತ್ತದೆ. ಪ್ರಸ್ತುತ ರಾಮ ಒಂಟಿಯಾಗಿದ್ದಾನೆ. ಶಬರಿಯಿಂದ ಹಣ್ಣು ಸ್ವೀಕರಿಸುವ ರಾಮನ ಮೂರ್ತಿ, ಚಿತ್ರ ಕಾಣಸಿಗುತ್ತಿಲ್ಲ. ಶ್ರೀರಾಮ ಸಾಂಸ್ಕೃತಿಕ ರಾಜಕಾರಣದಲ್ಲಿ ಸಿಲುಕಿದ್ದಾನೆ’ ಎಂದು ಹೇಳಿದರು.

ವಿ.ವಿ ಪ್ರಾಧ್ಯಾಪಕಿ ಅಣ್ಣಮ್ಮ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪದಾಧಿಕಾರಿಗಳಾದ ಡಿ.ಎನ್.ಯೋಗೀಶ್ವರಪ್ಪ, ಜಿ.ಎಚ್.ಮಹದೇವಪ್ಪ, ಕಂಟಲಗೆರೆ ಸಣ್ಣಹೊನ್ನಯ್ಯ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.