ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಆರೋಗ್ಯದಿಂದ ದೇಶದ ಪ್ರಗತಿ ಸಾಧ್ಯ

ನಾಗವಲ್ಲಿ ಸರ್ಕಾರಿ ಶಾಲೆಯ 'ಅಂತರರಾಷ್ಟ್ರೀಯ ಯೋಗ ದಿನಾಚರಣೆ'ಯಲ್ಲಿ ಶೈಲಜಾ ಕುಮಾರಿ ಅಭಿಪ್ರಾಯ
Last Updated 23 ಜೂನ್ 2018, 10:17 IST
ಅಕ್ಷರ ಗಾತ್ರ

ತುಮಕೂರು: ಯಾಂತ್ರಿಕೃತ ಜೀವನಶೈಲಿಯಿಂದ ಮಾನಸಿಕ ಆರೋಗ್ಯ ಕ್ಷೀಣಿಸುತ್ತಿರುವ ಸಲುವಾಗಿ ಆರೋಗ್ಯದಿಂದ ಬದುಕಲು ಯೋಗಾಭ್ಯಾಸ ಅಗತ್ಯ. ಪ್ರಜೆಗಳು ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ದೇಶದ ಪ್ರಗತಿ ಸಾಧ್ಯವಿದೆ ಎಂದು ಉಪ ಪ್ರಾಂಶುಪಾಲೆ ಶೈಲಜಾ ಕುಮಾರಿ ಅಭಿಪ್ರಾಯ ಪಟ್ಟರು.

ನಾಗವಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಏರ್ಪಡಿಸಿದ್ದ 'ಅಂತರರಾಷ್ಟ್ರೀಯ ಯೋಗ ದಿನಾಚರಣೆ'ಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಾಲೆಯ ದೈಹಿಕ ಶಿಕ್ಷಕ ಲೋಕೇಶ್ ಮಾತನಾಡಿ, ಇಂದಿನ ದಿನಗಳಲ್ಲಿ ದೇಹ ಮತ್ತು ಮನಸ್ಸಿಗೆ ಶ್ರಮ ಹೆಚ್ಚಾಗುತ್ತಿವೆ. ಇದರಿಂದ ಬಿ.ಪಿ. ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಂದ ಜನರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದೆ. ಹಾಗಾಗಿ ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸು ಸದೃಢಗೊಳಿಸಬೇಕು ಎಂದು ಹೇಳಿದರು.

ಸರ್ವತೋಮುಖ ಬೆಳವಣಿಗೆಗೆ ಶಾರೀರಿಕ, ಮಾನಸಿಕ, ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಅಭಿವೃದ್ಧಿ ಅಗತ್ಯ. ಶಾಲಾ, ಕಾಲೇಜು ಓದುವ ಮಕ್ಕಳು ಮತ್ತು ಯುವಜನರಿಗೆ ಏಕಾಗ್ರತೆ, ಗ್ರಹಣಶಕ್ತಿ , ನೆನಪಿನ ಶಕ್ತಿಯನ್ನು ಸುಸ್ಥಿತಿಯಲ್ಲಿಟ್ಟು, ಆರೋಗ್ಯಪೂರ್ಣವಾಗಿ ಶೈಕ್ಷಣಿಕ ಸಾಧನೆ ಮಾಡಬೇಕೆಂಬ ದೃಷ್ಟಿಯಿಂದ ಸರ್ಕಾರ ದೈಹಿಕ ಶಿಕ್ಷಣ ಹಾಗೂ ಯೋಗವನ್ನು ಪರಿಚಯಿಸಿದೆ ಎಂದು ತಿಳಿಸಿದರು.

ಶಾಲೆಯ ಸಿಬ್ಬಂದಿಗಳಾದ ಗೌರಿಶಂಕರ್, ಸುರೇಶ್, ಗಾಯತ್ರಿ, ಮಹಿಬಾ ಅತ್ತರಿ ಖಾನಂ, ನಮ್ಮ ಸ್ಕೂಲ್ ರೇಡಿಯೋದ ವಿದ್ಯಾರ್ಥಿ ಪ್ರತಿನಿಧಿಗಳಾದ ವರ್ಷ, ವಿಜಯಲಕ್ಷ್ಮಿ, ಜ್ಞಾನವಿ, ವೇಣು ಸೇರಿದಂತೆ ಬೋದಕೇತರ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT