ತಿಪಟೂರು: ಗಿಡ ನೆಟ್ಟು, ನೀರನ್ನು ಕೊಟ್ಟು, ನೋವನು ಮರೆತ ತಿಮ್ಮಕ್ಕ... ಇದು 10ನೇ ತರಗತಿ ವಿದ್ಯಾರ್ಥಿ ತಾಲ್ಲೂಕು ಮಟ್ಟದ ಪ್ರತಿಭಾಶ್ರೀ ಸ್ಪರ್ಧೆಯಲ್ಲಿ ಬರೆದು ಗಮನ ಸೆಳೆದ ಸರಳ, ಸುಂದರ ಅರ್ಥಗರ್ಭಿತ ಕವನದ ಒಂದು ಚರಣ.

ಮಕ್ಕಳಲ್ಲಿ ಸೃಜನಾತ್ಮಕ ಕಲೆ ಮತ್ತು ಬರವಣಿಗೆ, ವಿಜ್ಞಾನ ಆವಿಷ್ಕಾರ ಕುರಿತು ಆಸಕ್ತಿ ಮೂಡಿಸಲು ರಾಜ್ಯ ಬಾಲ ಭವನ ಸೊಸೈಟಿ, ಶಿಕ್ಷಣ ಇಲಾಖೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾಶ್ರೀ ಸ್ಪರ್ಧೆಯಲ್ಲಿ ಕೆಲ ವಿದ್ಯಾರ್ಥಿಗಳು ಆಶಾಭಾವ ಮೂಡಿಸಿದರು.
ಮಕ್ಕಳಲ್ಲಿ ಕಥೆ ಮತ್ತು ಕಾವ್ಯಾಸಕ್ತಿ ಕಡಿಮೆಯಾಗುತ್ತಿರುವ ಕೊರಗಿರುವ ಈ ಸಂದರ್ಭದಲ್ಲಿ ಒಂದಷ್ಟು ಭರವಸೆಯ ಬರವಣಿಗೆಗಳು ಸ್ಪರ್ಧೆಗೆ ಬಂದಿದ್ದವು.

ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಎಸ್.ಪ್ರೇಮಾ, ಸಾಲು ಮರದ ತಿಮ್ಮಕ್ಕನ ಬಗ್ಗೆ, ತಡಸೂರು ಜಿಎಚ್‌ಎಸ್ 8ನೇ ತರಗತಿ ವಿದ್ಯಾರ್ಥಿನಿ ಟಿ.ವಿ.ಜಯಶ್ರೀ ಬರೆದಿದ್ದ ಕವಿತೆಯೊಂದು ಬದುಕಿನ ಜೀವನ ಸೂತ್ರವನ್ನು ಸರಳವಾಗಿ ವಿವರಿಸುತ್ತಿತ್ತು.

ಸೃಜನಾತ್ಮಕ ಕಲೆಯ ಮಣ್ಣಿನ ಮಾದರಿ ವಿಭಾಗದಲ್ಲಿ ಅಸ್ತ್ರ ಒಲೆ, ಡೈನೋಸಾರ್ ಗಮನ ಸೆಳೆದವು. ಪ್ರದರ್ಶನ ಕಲೆ ವಿಭಾಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವಿಜ್ಞಾನ ಮಾದರಿ ವಿಭಾಗದಲ್ಲಿ ಹೊಸತನ ಕಾಣಲಿಲ್ಲ. ಇಂತಹ ಸ್ಪರ್ಧೆಗಳ ಮೂಲ ಉದ್ದೇಶ ಸಾರ್ಥಕವಾಗಬೇಕೆಂದರೆ ಸೃಜನಶೀಲತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನು ಮಕ್ಕಳಲ್ಲಿ ಅರಳಿಸುವ ಮಾರ್ಗಗಳನ್ನು ಶಿಕ್ಷಕರು ಕಂಡುಕೊಳ್ಳಬೇಕೆಂಬ ಇಚ್ಛೆ ವ್ಯಕ್ತವಾಗುತ್ತಿತ್ತು.

ವಿಜೇತರು: ಸೃಜನಾತ್ಮಕ ಬರವಣಿಗೆ-ಟಿ.ವೈ.ಜಯಶ್ರಿ (ಜಿಎಚ್‌ಎಸ್ ತಡಸೂರು), ಎಸ್. ಪ್ರೇಮಾ (ಜಿಜಿಜೆಸಿ), ಎಚ್.ಪ್ರೇಮಾ (ಹೊನ್ನವಳ್ಳಿ), ಸೃಜನಾತ್ಮಕ ಕಲೆ-ರಂಜಿತ್‌ಕುಮಾರ್ (ಎಲ್‌ಪಿಎಸ್ ಬಿದರೆಗುಡಿ), ಆರ್.ಮೋಹನ್‌ಕುಮಾರ್ (ಜಿಬಿಜೆಸಿ ತಿಪಟೂರು), ರಾಘವೇಂದ್ರ (ಎಚ್‌ಪಿಎಸ್ ಹೊನ್ನವಳ್ಳಿ), ವಿಜ್ಞಾನದಲ್ಲಿ ನೂತನ ಅವಿಷ್ಕಾರ-ಹೇಮಂತ್ ಕುಮಾರ್ (ಜಿಬಿಜೆಸಿ ತಿಪಟೂರು), ಈಶ್ವರ ಪ್ರಸಾದ್ (ಜಿಎಂಎಚ್‌ಪಿಎಸ್ ಕುಪ್ಪಾಳು), ರಮ್ಯೋ (ಜಿಎಚ್‌ಎಸ್ ಪಟ್ರೆಹಳ್ಳಿ),
ಚಾಲನೆ: ಈ ಸ್ಪರ್ಧೆಗಳಿಗೆ ಶಾಸಕ ಬಿ.ಸಿ.ನಾಗೇಶ್ ಚಾಲನೆ ನೀಡಿದರು. ಹಾರ‌್ಮೋನಿಯಂ ಕಲಾವಿದ ವೇದಾಂತಾಚಾರ್, ಬಿಇಒ ಮನಮೋಹನ್, ಸಿಡಿಪಿಒ ಎಸ್.ನಟರಾಜು, ಪ್ರಾಂಶುಪಾಲ ಕೆ.ಎಚ್.ರಂಗನಾಥ್ ಪಾಲ್ಗೊಂಡಿದ್ದರು. ಎಂ.ಆರ್.ಸೋಮಶೇಖರ್ ಸ್ವಾಗತಿಸಿ, ಎಸಿಡಿಪಿಒ ಸುಂದರಮ್ಮ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.