ಉಡುಪಿ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8000 ಗಡಿ ದಾಟಿದ್ದು, ಸೋಮವಾರ 270 ಮಂದಿಗೆ ಕೋವಿಡ್ ದೃಢಪಟ್ಟಿದೆ. ಒಟ್ಟು ಪ್ರಕರಣಗಳ ಸಂಖ್ಯೆ 8,245ಕ್ಕೇರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 107, ಕುಂದಾಪುರದ 141, ಕಾರ್ಕಳದ 15 ಹಾಗೂ ಇತರೆ ಜಿಲ್ಲೆಗಳ 7 ರೋಗಿಗಳು ಇದ್ದಾರೆ. 86 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 184 ಮಂದಿಗೆ ಲಕ್ಷಣಗಳು ಇಲ್ಲ.

60 ಸೋಂಕಿತರಿಗೆ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 210 ಮಂದಿಗೆ ಹೋಂ ಐಸೊಲೇಷನ್‌ನಲ್ಲಿರಿಸಿ ಆರೋಗ್ಯದ ಬಗ್ಗೆ ನಿಗಾ ಇರಿಸಲಾಗಿದೆ.

ಪ್ರಾಥಮಿಕ ಸಂಪರ್ಕದಿಂದ 114, ಐಎಲ್‌ಐ ಲಕ್ಷಣಗಳಿರುವ 62, ಸಾರಿ ಲಕ್ಷಣಗಳಿರುವ 10 ಹಾಗೂ ಹೊರ ಜಿಲ್ಲೆಗಳ ಪ್ರಯಾಣ ಹಿನ್ನೆಲೆ ಹೊಂದಿರುವ ಒಬ್ಬರಿಗೆ ಸೋಂಕು ತಗುಲಿದ್ದು, 114 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಸೋಮವಾರ ಬಂದ ಪರೀಕ್ಷಾ ವರದಿಗಳಲ್ಲಿ 530 ನೆಗೆಟಿವ್, 270 ಪಾಸಿಟಿವ್ ಇದೆ. 376 ಶಂಕಿತರ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 870 ವರದಿಗಳು ಬರುವುದು ಬಾಕಿ ಇದೆ.

ಇದುವರೆಗೂ ಸೋಂಕಿನ ಲಕ್ಷಣಗಳು ಕಂಡುಬಂದ 55,739 ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, 46,624 ವರದಿ ನೆಗೆಟಿವ್ ಹಾಗೂ 8,245 ವರದಿಗಳು ಪಾಸಿಟಿವ್ ಬಂದಿವೆ.

269 ಗುಣಮುಖ:

ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸೋಮವಾರ 269 ಸೇರಿ ಜಿಲ್ಲೆಯಲ್ಲಿ 5,630 ರೋಗಿಗಳು ಸೋಂಕಿನಿಂದ ಮುಕ್ತರಾಗಿದ್ದಾರೆ. ಸದ್ಯ 2,537 ಸಕ್ರಿಯ ಸೋಂಕಿತರು ಇದ್ದಾರೆ.

ಒಬ್ಬರ ಸಾವು:

ರಕ್ತದೊತ್ತಡ ಹಾಗೂ ತೀವ್ರ ಉಸಿರಾಟದ ಸಮಸ್ಯೆಯಿಂದ ನರಳುತ್ತಿದ್ದ ಕಾರ್ಕಳ ತಾಲ್ಲೂಕಿನ 56 ವರ್ಷದ ಕೋವಿಡ್ ಸೋಂಕಿತ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತ ಸೋಂಕಿತರ ಸಂಖ್ಯೆ 78ಕ್ಕೇರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.