ಭಾನುವಾರ, ಆಗಸ್ಟ್ 1, 2021
23 °C
ಉಡುಪಿ: 45 ಮಂದಿಗೆ ಸೋಂಕು ದೃಢ

ಒಂದು ತಿಂಗಳ ಮಗುವಿಗೂ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗಿದ್ದು, ಒಂದು ತಿಂಗಳ ಹಸುಗೂಸು ಸೇರಿ 45 ಮಂದಿಗೆ ಭಾನುವಾರ ಕೋವಿಡ್‌–19 ದೃಢಪಟ್ಟಿದೆ. 

ಸೋಂಕಿತರಲ್ಲಿ 17 ಪುರುಷರು, 20 ಮಹಿಳೆಯರು ಹಾಗೂ 8 ಮಕ್ಕಳು ಇದ್ದಾರೆ. 6 ಜನರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದ್ದು, ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ 18 ಜನರಲ್ಲಿ ಹಾಗೂ ಆಂಧ್ರದಿಂದ ಬಂದಿದ್ದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 

ಪಿ–15,298 ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ 6 ಜನರಿಗೆ, ರೋಗಿ ಸಂಖ್ಯೆ 10,195 ಹಾಗೂ 11,340ರಿಂದ ಇಬ್ಬರಿಗೆ, 15,283, 12,042 ವ್ಯಕ್ತಿಯಿಂದ ತಲಾ ಇಬ್ಬರಿಗೆ, 13,341, 16,587, 11,339, 12,022, 12,047 ಸಂಪರ್ಕದಿಂದ ತಲಾ ಒಬ್ಬರಿಗೆ, ಚಿತ್ರದುರ್ಗ ಪ್ರಯಾಣ ಮಾಡಿದ ಒಬ್ಬರಿಗೆ, ಹಾಸನ ಪ್ರಯಾಣ ಮಾಡಿದ ಇಬ್ಬರಿಗೂ ಸೋಂಕು ತಗುಲಿದೆ.

ಭಾನುವಾರ ಉಸಿರಾಟದ ಸಮಸ್ಯೆ, ಶೀತ ಜ್ವರದ ಲಕ್ಷಣ, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 279 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 1,428 ವರದಿಗಳು ಬರುವುದು ಬಾಕಿ ಇದೆ. ಸೋಂಕಿನ ಲಕ್ಷಣಗಳು ಕಂಡುಬಂದ 25 ಪುರುಷರು ಹಾಗೂ ಐವರು ಮಹಿಳೆಯರನ್ನು ಐಸೊಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,322ಕ್ಕೇರಿಕೆಯಾಗಿದ್ದು, ಇದುವರೆಗೂ ಗುಣಮುಖರಾಗಿ 1,136 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಧ್ಯ 183 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು