ಕುಂದಾಪುರ: ‘ಅಜ್ಜ, ತಂದೆ, ತಾಯಿ ಹಾಗೂ ಗುರುಗಳು ನನ್ನ ಬದುಕಿನ ಪ್ರೇರಕರಾಗಿದ್ದು, ಅವರ ನೆನಪಿನಲ್ಲಿ ಮುಂದಿನ ದಿನಗಳಲ್ಲಿ ಕಲಾರಂಗದ ಎಲ್ಲ ಚಟುವಟಿಕೆಗೆ ನೆರವಾಗಲು ಸಿದ್ಧನಾಗಿದ್ದೇನೆ’ ಎಂದು ಇಂಡಿ ವಿಲೇಜ್ ಸಂಸ್ಥಾಪಕ ಶ್ರೀಕಾಂತ್ ಕೆ.ಅರಿಮಣಿತ್ತಾಯ ಹೇಳಿದರು.

ಯಕ್ಷ ಕಲಾರಂಗದ ವಿದ್ಯಾಪೋಷಕ್ ಯೋಜನೆಯ ಅಂಗವಾಗಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಸವಿತಾ ಮತ್ತು ದಿ.ಸುಧಾಕರ ಶೆಟ್ಟಿ ದಂಪತಿ ಪುತ್ರಿ, ವಿದ್ಯಾಪೋಷಕ್ ವಿದ್ಯಾರ್ಥಿನಿ, ಸುಶ್ಮಿತಾ ಅವರಿಗೆ ಕುಂದಾಪುರ ತಾಲ್ಲೂಕಿನ ಮೂಡುಮುಂದದ ಮೋರ್ಟುವಿನಲ್ಲಿ ನಿರ್ಮಿಸಿದ ‘ವಜ್ರಮ್’ ಮನೆಯನ್ನು ಶನಿವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ಸಮಾಜದ ದುರ್ಬಲ ವರ್ಗದ ಮಕ್ಕಳಿಗೆ ಉದ್ಯೋಗ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದ ಅವರು, ಭವಿಷ್ಯದ ಯೋಜನೆಗಳನ್ನು ಪ್ರಕಟಿಸಿದರು.

ವಿವಾಹ ಮಹೋತ್ಸವದ ನೆನಪಿಗಾಗಿ, ₹6.50 ಲಕ್ಷ ವೆಚ್ಚದಲ್ಲಿ ಇಂಡಿ ವಿಲೇಜ್ನ ಸಂಸ್ಥಾಪಕ ಶ್ರೀಕಾಂತ್ ಕೆ.ಅರಿಮಣಿತ್ತಾಯ ಮತ್ತು ಭಾರತಿ ಶ್ರೀಕಾಂತ್ ದಂಪತಿ ಮನೆ ನಿರ್ಮಿಸಿದ್ದಾರೆ.

ಶಿಕ್ಷಣತಜ್ಞ ಬಿ.ಭಾಸ್ಕರ್ ರಾವ್, ಬೆಂಗಳೂರಿನ ಭೀಮ ಗೋಲ್ಡ್ಸ್ ಸಂಸ್ಥೆಯ ಪ್ರಮುಖರಾದ ಶ್ರೀಪತಿ ಭಟ್ ಮಾತನಾಡಿದರು.

ಶ್ರೀಕಾಂತ್ ಅರಿಮಣಿತ್ತಾಯ ಅವರ ತಾಯಿ ಪುಷ್ಕಳಾ ಕೃಷ್ಣನ್, ಪುತ್ರ ವಿಶಾಲ್ ಅರಿಮಣಿತ್ತಾಯ, ಕುಟುಂಬಿಕರಾದ ನಚಿಕೇತ, ನಾಗರಾಜ ಆಚಾರ್ಯ, ಬಾಲಕೃಷ್ಣ ಕೋರ್ನಾಯ, ಸುಬ್ರಮಣ್ಯ ಭಟ್, ಹಯವದನ ಭಟ್, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಸದಸ್ಯರಾದ ಯು.ವಿಶ್ವನಾಥ ಶೆಣೈ, ಯು.ಎಸ್.ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಅಶೋಕ ಎಂ., ನಟರಾಜ ಉಪಾಧ್ಯ, ಗಣರಾಜ ಭಟ್, ವಿದ್ಯಾಪ್ರಸಾದ್, ಮಂಜುನಾಥ ಹೆಬ್ಬಾರ್, ಕಿಶೋರ್ ಸಿ. ಉದ್ಯಾವರ, ಗಣೇಶ ಬ್ರಹ್ಮಾವರ, ಗಣಪತಿ ಭಟ್, ರಾಘವೇಂದ್ರ ಸೋಮಯಾಜಿ ಭಾಗವಹಿಸಿದ್ದರು.

ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಎಚ್.ಎನ್.ವೆಂಕಟೇಶ್ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.