ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿಕ ಸಂಘದಿಂದ ಆಟಿದ ಕಮ್ಮೆನ ಕಾರ್ಯಕ್ರಮ

Published 12 ಆಗಸ್ಟ್ 2024, 5:05 IST
Last Updated 12 ಆಗಸ್ಟ್ 2024, 5:05 IST
ಅಕ್ಷರ ಗಾತ್ರ

ಉಡುಪಿ: ನಮ್ಮ ಹಿರಿಯರು ಲಾಭ ನಷ್ಟ ನೋಡದೆ ಕೃಷಿ ಮಾಡಿದರು. ಪ್ರಕೃತಿಯನ್ನು ಪೂಜಿಸಿ, ಅನುಸರಿಸಿ ಬಾಳಿ ವಿಷಮುಕ್ತ ಬದುಕನ್ನು ಬದುಕಿದರು. ಸಂಬಂಧಗಳನ್ನು ಬೆಸೆಯಲು, ಉಳಿಸಿಕೊಳ್ಳಲು ಹಲವು ಕೂಡುಕಟ್ಟಳೆಗಳನ್ನು ಆಚರಣೆಗೆ ತಂದರು ಎಂದು ಗೋವಿಂದದಾಸ ಕಾಲೇಜು ಉಪನ್ಯಾಸಕಿ ಅಕ್ಷತಾ ವಿ. ಹೇಳಿದರು.

ಉಡುಪಿ ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ವತಿಯಿಂದ ಬೊಬ್ಬರ್ಯ ಕಟ್ಟೆ ವಠಾರದಲ್ಲಿ ಭಾನುವಾರ ಆಯೋಜಿಸಿದ್ದ ಆಟಿದ ಕಮ್ಮೆನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದು ಲಾಭಕ್ಕಾಗಿ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ, ಗಿಡ–ಮರಗಳ ನಾಶ, ಆಹಾರಕ್ಕಾಗಿ ಬೇಕರಿ ಉತ್ಪನ್ನಗಳ ಅವಲಂಬನೆ ಹೇಳ ಹೆಸರಿಲ್ಲದ ಹೊಸ ಹೊಸ ಕಾಯಿಲೆಗಳ ಹುಟ್ಟಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕೃಷಿಕ ಸಂಘ ಪೆರಂಪಳ್ಳಿ ವಲಯಾಧ್ಯಕ್ಷ ರವೀಂದ್ರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ಸುನೀಲ್ ಡೊಮೆನಿಕ್ ಲೋಬೊ ಉದ್ಘಾಟಿಸಿದರು.

ಅತಿಥಿಗಳಾಗಿ ಕೃಷಿಕರಾದ ಶಂಕರ ಕೋಟ್ಯಾನ್, ಪಿ.ಎನ್. ಶಶಿಧರ ರಾವ್, ಹರಿಕೃಷ್ಣ ಶಿವತ್ತಾಯ, ಸುಧಾಕರ ಕೋಟ್ಯಾನ್ , ಕುತ್ಪಾಡಿ ಜೂಲಿಯನ್ ದಾಂತಿ, ಸಿರಿ ಚಾವಡಿಯ ಈಶ್ವರ್ ಚಿಟ್ಪಾಡಿ, ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿದ್ದರು.

10ನೇ ತರಗತಿಯಲ್ಲಿ ತುಳು ಭಾಷೆ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದ ತೇಜಸ್ವಿನಿ ಪೂಜಾರಿ, ಇತ್ತೀಚೆಗೆ ನಿವೃತ್ತರಾದ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್‍ ಅವರನ್ನು ಸನ್ಮಾನಿಸಲಾಯಿತು.

ಪೆರಂಪಳ್ಳಿ ಮತ್ತು ಶೀಂಬ್ರದ ಕೃಷಿಕ ಮಹಿಳೆಯರು ತಾವು ತಯಾರಿಸಿದ 50 ಬಗೆಯ ಆಟಿಯ ವಿವಿಧ ತಿಂಡಿ ತಿನಿಸುಗಳನ್ನು ಉಣ ಬಡಿಸಿದರು.

ರಮೇಶ್ ಬಂಗೇರಾ, ಜಯಕುಮಾರ್ ಸಾಲಿಯಾನ್, ಅನಿಲ್ ಗೊನ್ಸ್ ವಾಲಿಸ್, ಫ್ರೆಡ್ರಿಕ್ ಡಿಸೋಜಾ, ಸೋಮನಾಥ ಪೂಜಾರಿ, ಪೀಟರ್ ಡಿಸೋಜ, ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಇದ್ದರು. ಸುಬ್ರಹ್ಮಣ್ಯ ಶ್ರೀಯಾನ್ ಪೆರಂಪಳ್ಳಿ ನಿರೂಪಿಸಿದರು. ಕಾರ್ಯದರ್ಶಿ ಚಂದ್ರಶೇಖರ ಶೀಂಬ್ರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT