ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪಾಲ | ಪರ್ಕಳ ಕೆನರಾ ಬ್ಯಾಂಕ್ ಎದುರೇ ತೆರೆದ ಹೊಂಡ

Published 25 ಮೇ 2023, 5:16 IST
Last Updated 25 ಮೇ 2023, 5:16 IST
ಅಕ್ಷರ ಗಾತ್ರ

ಮಣಿಪಾಲ : ಸಮೀಪದ ಪರ್ಕಳದ ಕೆನರಾ ಬ್ಯಾಂಕಿನ ಎದುರು ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತು ಬೃಹತ್ ಹೊಂಡ ನಿರ್ಮಾಣವಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಗುಂಡಿಯ ಸುತ್ತಲೇ ಯಾವುದೇ ರಕ್ಷಣಾ ತಡೆ ಬೇಲಿ ನಿರ್ಮಿಸದ ಪರಿಣಾಮ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಕಂಟಕವಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಬ್ಯಾಂಕ್‌ ಸೇವೆ ಪಡೆಯಲು ನೂರಾರು ಮಂದಿ ನಿತ್ಯ ಭೇಟಿ ನೀಡುವುದರಿಂದ ಗುಂಡಿಯಲ್ಲಿ ಬಿದ್ದು ಅಪಾಯ ಮೈಮೇಲೆ ಎಳೆದುಕೊಳ್ಳಬಹುದು. ಕೂಡಲೇ ಸಂಬಂಧಪಟ್ಟ ಇಲಾಖೆ ಕಾಮಗಾರಿ ಪೂರ್ಣಗೊಳಿಸಿ ಗುಂಡಿ ಮುಚ್ಚಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ನಿತ್ಯ ದೂಳಿನ ಅಭಿಷೇಕ’

ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿ ಪರ್ಕಳದಿಂದ ಹೆಬ್ರಿವರೆಗೂ ಭರದಿಂದ ಸಾಗಿದ್ದು ಕಾಮಗಾರಿ ಪ್ರದೇಶದಲ್ಲಿ ವಿಪರೀತ ಧೂಳು ಏಳುತ್ತಿದೆ. ಪರಿಣಾಮ ಬೈಕ್‌ನಲ್ಲಿ ಸಾಗುವವರಿಗೆ ಹಾಗೂ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ದೂಳಿನಲ್ಲಿ ಅಭಿಷೇಕ ಮಾಡಿದಂತಾಗುತ್ತಿದೆ. ವಿಪರೀತ ದೂಳಿನಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಾಮಗಾರಿ ನಿರ್ವಹಣೆ ಹೊಣೆ ಹೊತ್ತಿರುವವರು ದೂಳು ಏಳದಂತೆ ನೀರು ಸಿಂಪರಿಸಬೇಕು ಎಂದು ಸ್ಥಳೀಯರಾದ ವಿಶ್ವರಾಜ್, ರಾಜಕುಮಾರ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT