ಶಿರ್ವ: ಪಡುಕುತ್ಯಾರಿನ ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದಲ್ಲಿ ಕೋಟಿ ಕುಂಕುಮಾರ್ಚನೆ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿದ್ದು, ಸರಸ್ವತಿ ಮಾತೃಮಂಡಳಿ, ಆನೆಗುಂದಿ ಪ್ರತಿಷ್ಠಾನದ ವ್ಯಾಪ್ತಿಯ ದೇವಸ್ಥಾನಗಳು, ಗ್ರಾಮ ಪಂಚಾಯಿತಿಗಳ ಹಿಂದೂ ಸಮಾಜ ಬಾಂಧವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮಹಾಸಂಸ್ಥಾನದ ವಿವಿಧ ಯೋಜನೆಗಳ ಸಾಕಾರ ಮತ್ತು ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಕೇಪಳಪುಷ್ಪದೊಂದಿಗೆ ಸರಸ್ವತಿ ಯಾಗ ಶಾಲೆಯಲ್ಲಿ ಜ. 12ರ ಪರ್ಯಂತ ಕೋಟಿ ಕುಂಕುಮಾರ್ಚನೆ ಜರುಗಲಿದೆ.

ಇದೇ ವೇಳೆ ಅಷ್ಟಚಾತ್ವಾರಿಂಶತ್ ನಾರಿಕೇಳ ಗಣಯಾಗ, ಗುರುಭಕ್ತಿ ಕುಸುಮಾಂಜಲಿ ಸ್ತೋತ್ರ ಪುಸ್ತಕ ಬಿಡುಗಡೆ, ಮಹಾಸಂಸ್ಥಾನದ ಯುಟ್ಯೂಬ್ ಚಾನೆಲ್ ಆರಂಭ, ರುದ್ರ ಯಾಗ, ಮಹಾ ಮೃತ್ಯುಂಜಯ ಯಾಗ ಜರುಗಲಿದ್ದು, ಜ. 8ರಂದು ವಿಷ್ಣು ಹವನ, ಧನ್ವಂತರಿ ಹೋಮ. 9ರಂದು ಆದಿತ್ಯ ಹೃದಯ ಹೋಮ, ಸೌರ ಸೂಕ್ತ ಹೋಮ ನಡೆಯಲಿದೆ.

10ರಂದು ಸರಸ್ವತಿ ಹೋಮ, ದುರ್ಗಾ ಹೋಮ. 11ರಂದು ವಿಶ್ವಕರ್ಮ ಹೋಮ, ನವಗ್ರಹ ಹೋಮ. 12ರಂದು ದಶ ಸಹಸ್ರ ಕದಳಿ ಲಲಿತಾ ಸಹಸ್ರನಾಮ ಹೋಮಗಳು, ಸೂಕ್ತ ಹೋಮ ಬಳಿಕ ಅರ್ಚನಾಸೇವೆ ನಡೆದು ಕೋಟಿ ಕುಂಕುಮಾರ್ಚನೆಯ ಸಮರ್ಪಣೆ ನಂತರ ಧಾರ್ಮಿಕ ಸಭೆ ನಡೆಯಲಿದೆ.

ಪ್ರತಿದಿನ ಮಧ್ಯಾಹ್ನ 1ಕ್ಕೆ ಭೋಜನ, ವಿವಿಧ ತಂಡಗಳಿಂದ ಭಜನಾ ಸಂಕೀರ್ತನಾ ಸೇವೆ, 2.30ರಿಂದ 5ರವರೆಗೆ ಅರ್ಚನೆ ಮುಂದುವರಿಕೆ, ಸಂಜೆ 5.15ರಿಂದ ಮಹಾಪೂಜೆ, ಅಷ್ಟಾವಧಾನ, ತೀರ್ಥ ಪ್ರಸಾದ ವಿತರಣೆ, ಉಪಾಹಾರ ನಡೆಯಲಿದೆ. ಕೋಟಿ ಕುಂಕುಮಾರ್ಚನೆಯ ಪ್ರಸಾದವನ್ನು 12ರಂದು ಮಧ್ಯಾಹ್ನ 12ರಿಂದ ವಿತರಿಸಲಾಗುವುದು.

12ರಂದು ಧಾರ್ಮಿಕ ಸಭೆ

ಶಿರ್ವ: ಜ. 12ರಂದು ಕೋಟಿ ಕುಂಕುಮಾರ್ಚನೆಯು ಸಮಾಪ್ತಿಗೊಳ್ಳಲಿದ್ದು ಬೆಳಿಗ್ಗೆ 11ಕ್ಕೆ ಸಮಾರೋಪ ಜರುಗಲಿದೆ.

ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸುವರು. ಸರಸ್ವತಿ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ ಪ್ರಾಸ್ತಾವಿಕವಾಗಿ ಮಾತನಾಡುವರು.

ಆನೆಗುಂದಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ವಿದ್ವಾನ್ ಮಹಾಮಹೋಪಾಧ್ಯಾಯ ಪಂಜ ಭಾಸ್ಕರ ಭಟ್, ಘನಪಾಠಿ ವಿದ್ವಾನ್ ಬಾಲಚಂದ್ರ ಭಟ್ ಚಂದುಕೂಡ್ಲು, ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನ ನಾಯಂಡರಹಳ್ಳಿ ಬೆಂಗಳೂರು ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ, ಸರಸ್ವತಿ ಮಾತೃಮಂಡಳಿ ಪಡುಕುತ್ಯಾರು ಗೌರವಾಧ್ಯಕ್ಷೆ ಸರಳಮ್ಮ ಗುರುನಾಥ ಸ್ವಾಮಿ ಶಿಕಾರಿಪುರ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ ಉಡುಪಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ ಬಾಯಾರು ಧಾರ್ಮಿಕ ಉಪನ್ಯಾಸ ನೀಡುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಯಶ್ಪಾಲ್ ಎ. ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ವಿಶೇಷ ಆಹ್ವಾನಿತರಾಗಿ ಮುನಿಯಾಲು ಸಂಜೀವಿನಿ ಗೋಧಾಮದ ಸವಿತಾ ಆರ್ ಆಚಾರ್ಯ, ವೀಣಾ ವಿಶ್ವನಾಥ ರಾವ್ ದೋಹಾ ಕತಾರ್ ಭಾಗವಹಿಸುವರು. ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಸ್.ಆರ್.ಹರೀಶ್ ಆಚಾರ್ಯ ಜಳಕದಕಟ್ಟೆ ಅವರಿಗೆ ಮಹಾಸಂಸ್ಥಾನದ ವತಿಯಿಂದ ಗೌರವ ಅಭಿನಂದನೆ ನಡೆಯಲಿದೆ.

ಮಂಗಳೂರಿನ ಎಸ್.ಕೆ.ಜಿ.ಐ ಕೋ ಆಪ್ ಸೊಸೈಟಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಪೆರ್ಡೂರು, ಕುತ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಆಚಾರ್ಯ ಕಳತ್ತೂರು, ಪ್ರಸಾದ್ ಶೆಟ್ಟಿ ಕುತ್ಯಾರು, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ.ಸುವರ್ಣ ಶುಭಾಶಂಸನೆ ಗೈಯುವರು ಎಂದು ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಬಿ.ಸೂರ್ಯಕುಮಾರ್ ಹಳೆಯಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.