ಗುರುವಾರ , ಜನವರಿ 21, 2021
18 °C

ಕೃಷ್ಣಮಠದಲ್ಲಿ ಭೋಜನ ವ್ಯವಸ್ಥೆ ಮರು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌ನಿಂದಾಗಿ ಕೃಷ್ಣಮಠದಲ್ಲಿ ಸ್ಥಗಿತವಾಗಿದ್ದ ಭೋಜನ ವ್ಯವಸ್ಥೆ ಭಾನುವಾರದಿಂದ ಆರಂಭವಾಯಿತು. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಭಕ್ತರಿಗೆ ಅನ್ನಪ್ರಸಾದ ಬಡಿಸಿ ಅನ್ನದಾಸೋಹಕ್ಕೆ ಮರು ಚಾಲನೆ ನೀಡಿದರು.

ಬೆಳಿಗ್ಗೆ ದೇವರಿಗೆ ಅರ್ಪಿಸಲಾಗಿದ್ದ ಹಯಗ್ರೀವ ಹಾಗೂ ಪಾಯಸವನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ಬಡಿಸಲಾಯಿತು. 5,000 ಭಕ್ತರು ಭೋಜನ ಸ್ವೀಕರಿಸಿದರು ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಮಾರ್ಚ್ 23ರಿಂದ ಅನ್ನ ಪ್ರಸಾದವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ದೇಗುಲ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ ಅನ್ನದಾಸೋಹ ವ್ಯವಸ್ಥೆ ಆರಂಭಿಸಿರಲಿಲ್ಲ. ವರ್ಷಾರಂಭದಲ್ಲಿ ಉಡುಪಿಗೆ ಭೇಟಿನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಮಠದಲ್ಲಿ ಭೋಜನದ ವ್ಯವಸ್ಥೆ ಮತ್ತೆ ಆರಂಭಿಸಿರುವುದು ಭಕ್ತರಿಗೆ ಅನುಕೂಲವಾದಂತಾಗಿದೆ. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಕೃಷ್ಣಮಠದಲ್ಲಿ ಭೋಜನದ ವ್ಯವಸ್ಥೆ ಇದೆ.

ದರ್ಶನ ಮಾರ್ಗ ಬದಲಾವಣೆ: ಕೃಷ್ಣಮಠದಲ್ಲಿ ದೇವರ ದರ್ಶನದ ಮಾರ್ಗ ಬದಲಾವಣೆ ಮಾಡಲಾಗಿದ್ದು, ಪೂರ್ವ ಈಶಾನ್ಯ ದಿಕ್ಕಿನಲ್ಲಿರುವ ಕಾಂಪ್ಲೆಕ್ ಮೂಲಕ ಸಾಗಿ, ಭೋಜನ ಶಾಲೆ, ಮಧ್ವ ಸರೋವರ, ಕಟ್ಟಿಗೆ ರಥ, ಸುವರ್ಣ ಗೋಪುರ ವೀಕ್ಷಣೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ, ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ದೇವರ ದರ್ಶನ ಪಡೆಯಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು