ಗುರುವಾರ , ಮಾರ್ಚ್ 30, 2023
24 °C
ಸಚಿವ ಅರವಿಂದ ಲಿಂಬಾವಳಿ

ಕೋಟಿ ಚೆನ್ನಯ ಥೀಂ ಪಾರ್ಕ್‌ಗೆ ₹ 2 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ಕೋಟಿ ಚೆನ್ನಯ ಥೀಂ ಪಾರ್ಕ್ಅ‌ನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಮತ್ತು ಇತರ ವಿವಿಧ ಕಾಮಗಾರಿಗಳ ಪೂರ್ಣತೆಗೆ ₹2 ಕೋಟಿ ಅನುದಾನ ನೀಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಇಲ್ಲಿನ ಕೋಟಿ ಚೆನ್ನಯ ಥೀಂ ಪಾರ್ಕ್‌ಗೆ ಶನಿವಾರ ಭೇಟಿ ನೀಡಿ ಮಾತನಾಡಿ, ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನವನ್ನು ಅದಕ್ಕಾಗಿ ಬಳಸಲಾಗುತ್ತಿದೆ. ಇಲ್ಲದೆ ಇದ್ದಿದ್ದರೆ ವಿವಿಧ ಉತ್ಸವ, ಕಲಾವಿದರ ಮಾಸಾಶನಕ್ಕೆ ಬಳಕೆ ಮಾಡಲಾಗುತ್ತಿತ್ತು. ಸರ್ಕಾರದ ಕೆಲಸಗಳು ಅನುದಾನ ಆಧಾರಿತ ಆಗಿರುವುದರಿಂದ ಶಾಸಕರ ಮನವಿ ಪುರಸ್ಕರಿಸಿ ಅದು ಸದುಪಯೋಗವಾಗುತ್ತದೆ ಎಂಬ ದೃಷ್ಟಿಯಿಂದ ಈ ಅನುದಾನ ನೀಡಲಾಗುವುದು. ಜತೆಗೆ ಈ ಬಾರಿ ನೀಡಿದಂತೆ ಥೀಂ ಪಾರ್ಕ್‌ನ ನಿರ್ವಹಣಾ ವೆಚ್ಚ ವರ್ಷಕ್ಕೆ ₹ 10 ಲಕ್ಷ ಶಾಶ್ವತ ಅನುದಾನ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

ಸಚಿವರು ಥೀಂ ಪಾರ್ಕ್ ಆವರಣದಲ್ಲಿ ಗಿಡ ನೆಟ್ಟರು. ಶಾಸಕ ವಿ ಸುನಿಲ್ ಕುಮಾರ್, ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು