ಭಾನುವಾರ, ಡಿಸೆಂಬರ್ 15, 2019
19 °C
ದೃಷ್ಟಿ ಗ್ಯಾಲರಿಯಲ್ಲಿ ಕಲಾವಿದ ಕೆ.ವಿ.ಶಂಕರ ಅವರ ಚಿತ್ರಗಳ ಅನಾವರಣ

ನಾಳೆಯಿಂದ ಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಆರ್ಟಿಸ್ಟ್‌ ಫೋರಂ ಉಡುಪಿ ಸಂಸ್ಥೆಯಿಂದ ಅ.19 ಹಾಗೂ 20ರಂದು ನಗರದ ದೃಷ್ಟಿ ಗ್ಯಾಲರಿಯಲ್ಲಿ  ಕಲಾ ಪ್ರದರ್ಶನ ಹಾಗೂ ಕಲಾ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ ಎಂದು ಫೋರಂನ ಕಾರ್ಯದರ್ಶಿ ಸಕು ಪಾಂಗಳ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 19ರಂದು ಮಧ್ಯಾಹ್ನ 4.30ಕ್ಕೆ ಎಸ್‌ಪಿ ನಿಶಾ ಜೇಮ್ಸ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖಂಡರಾದ ವಿಜಯೇಂದ್ರ ವಸಂತ್, ಪ್ರಕಾಶ್‌ಚಂದ್ರ ಶೆಟ್ಟಿ, ಫೋರಂ ಅಧ್ಯಕ್ಷ ರಮೇಶ್‌ ರಾವ್ ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮದ ಬಳಿಕ ಹುಬ್ಬಳ್ಳಿಯ ಕಲಾವಿದ ಕೆ.ವಿ.ಶಂಕರ್ ಅವರ ಕಲಾ ಪ್ರದರ್ಶನ ನಡೆಯಲಿದೆ ಎಂದರು.

20ರಂದು ಮಧ್ಯಾಹ್ನ 2ಕ್ಕೆ ಕಲಾಕೃತಿಗಳ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ.‌ ಜಾನಪದ ಸಂಗೀತ ವಾದ್ಯ ನುಡಿಸುವ ಕಲಾಕೃತಿ ಸೇರಿದಂತೆ ಸಾಂಸ್ಕೃತಿಕ ವೈಭವವನ್ನು ಸಾರುವ ಕಲಾಕೃತಿಗಳ ಪ್ರದರ್ಶನವಿದ್ದು, ಆಸಕ್ತರು ವೀಕ್ಷಿಸಬಹುದು. ಅ.21ರವರೆಗೂ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಫೋರಂ ಸದಸ್ಯರಾದ ಸಿಂಧು ಕಾಮತ್, ಪ್ರಸಾದ್ ರಾವ್ ಉಪಸ್ಥಿತರಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು