ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ ಆರೋಪ: ದೂರು

Last Updated 4 ಆಗಸ್ಟ್ 2020, 15:36 IST
ಅಕ್ಷರ ಗಾತ್ರ

ಉಡುಪಿ: ಪೊಲೀಸರ ಸಮ್ಮುಖದಲ್ಲೇ ಬಜರಂಗ ದಳದ ಕಾರ್ಯಕರ್ತರು ಅರೆನಗ್ನಗೊಳಿಸಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಾರ್ಕಳ ತಾಲ್ಲೂಕಿನ ಈದುವಿನ ಜಂಗೊಟ್ಟು ಕಾಲೊನಿಯ ಸೀತಾರಾಮ ಮಲೆಕುಡಿಯ ಎಂಬುವರು ಎಸ್‌ಪಿಗೆ ದೂರು ನೀಡಿದ್ದಾರೆ.

‘ಜುಲೈ 22ರಂದು ಅಬ್ದುಲ್‌ ರೆಹಮಾನ್ ಎಂಬುವರು ಬಕ್ರೀದ್ ಹಬ್ಬಕ್ಕೆ ಆಡು ಖರೀದಿಸಲು ಮನೆಗೆ ಬಂದಾಗ, ತಪ್ಪಾಗಿ ತಿಳಿದ ಬಜರಂಗದಳ ಕಾರ್ಯಕರ್ತರು ಖರೀದಿಗೆ ಬಂದವರ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದರು. ರಾತ್ರಿ 11ಕ್ಕೆ ಮನೆಗೆ ನುಗ್ಗಿ ಕಾರ್ಕಳ ಗ್ರಾಮಾಂತರ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಎದುರೇ ಅರೆನಗ್ನಗೊಳಿಸಿ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದರು. ಬಳಿಕ ಠಾಣೆಗೆ ಕರೆದೊಯ್ದ ಪೊಲೀಸರು ಪ್ರಾಣಿಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದರು. ಬಳಿಕ ಜಾಮೀನನ ಮೇಲೆ ಬಿಡುಗಡೆಯಾಗಿದ್ದೇನೆ’ ಎಂದು ಸೀತಾರಾಮ ಮಲೆಕುಡಿಯ ದೂರಿನಲ್ಲಿ ವಿವರಿಸಿದ್ದಾರೆ.

‘ಹಲ್ಲೆ ಘಟನೆಯಿಂದ ತುಂಬಾ ನೊಂದಿದ್ದು, ಹಲ್ಲೆ ನಡೆಸಿದವರ ಹಾಗೂ ಕರ್ತವ್ಯ ಲೋಪ ಎಸಗಿದ ಅಧಿಕಾರಿ ವಿರುದ್ಧ‌ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT