ಹೆಬ್ರಿ: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಟೊ ಚಾಲಕರು ಉತ್ತಮ ಸೇವೆ ನೀಡುತ್ತಾರೆ. ಗ್ರಾಮೀಣ ಭಾಗದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತಿರುವ ಅವರ ಕಾರ್ಯ ಶ್ಲಾಘನೀಯ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶಿಕ್ಷಣದ ಮೂಲಕ ಸಂಘಟಿತರಾಗಿ’ ಎಂದು ರಾಜ್ಯ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಬೇಳಂಜೆ ಶ್ರೀಬ್ರಹ್ಮಬೈದರ್ಕಳ ರಿಕ್ಷಾ ಚಾಲಕ–ಮಾಲಕರ ನೂತನ ಸಂಘ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ರಿಕ್ಷಾ ಸಾರಥಿ ಸಂಭ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನಿನ ಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಆಟೊದಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವಾಗ ಜಾಗ್ರತೆ ವಹಿಸಿ. ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರ ನೀಡಿ ಎಂದು ಹೆಬ್ರಿ ಸಬ್ ಇನ್ಸ್ಪೆಕ್ಟರ್ ರವಿ ಬಿ.ಕೆ ಹೇಳಿದರು.

ನೋಂದಾವಣಿ ಪ್ರತಿಯನ್ನು ಸುಳ್ಯ ಕೆವಿಜಿ ದಂತ ಕಾಲೇಜಿನ ವಿಭಾಗದ ಮುಖ್ಯಸ್ಥ ಹಾಗೂ ಸ್ನಾತಕೋತ್ತರ ಅಧ್ಯಯನಗಳ ನಿರ್ದೇಶಕ ಡಾ. ಶರತ್ ಕುಮಾರ್ ಶೆಟ್ಟಿ ಹಸ್ತಾಂತರಿಸಿದರು.

ಸಂಘದ ಅಧ್ಯಕ್ಷ ಉದಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಶಿಕ್ಷಕಿ ಜಯಂತಿ ಅವರನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ರಸಮಂಜರಿ, ಸಹಾಯಧನ ವಿತರಣೆ, ಕುಂದಾಪುರ ಕನ್ನಡದ ಹಾಸ್ಯಮಯ ನಗೆ ನಾಟಕ ಅವ್ಳು ನನ್ನವಳ್ ಏಗಳಿಗೂ ನಡೆಯಿತು.

ಶಾಸಕ ಸುನಿಲ್ ಕುಮಾರ್, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಕುಚ್ಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಸಂಘದ ಗೌರವಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು, ಕಾನೂನು ಸಲಹೆಗಾರ ಸುನಿಲ್ ಪೂಜಾರಿ, ಉದ್ಯಮಿಗಳಾದ ಕಿರಣ್ ತೋಳಾರ್, ಬೇಳಂಜೆ ಹರೀಶ ಪೂಜಾರಿ, ಪ್ರಸಾದ್ ಶೆಟ್ಟಿ, ಸನತ್ ಕುಮಾರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಪಾಂಡುರಂಗ ಪೂಜಾರಿ, ಶ್ರೀಕಾಂತ್ ಪೂಜಾರಿ, ಗುತ್ತಿಗೆದಾರರಾದ ಭೋಜ ಕುಲಾಲ್, ಅಶೋಕ್ ಶೆಟ್ಟಿ ಚೋರಾಡಿ, ಸ್ಥಳೀಯ ಮುಖಂಡ ಅಮೃತ ಕುಮಾರ್ ಶೆಟ್ಟಿ, ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್, ಸಂಘದ ಸದಸ್ಯರಾದ ಸಂದೀಪ್ ಕುಲಾಲ್, ಕೃಷ್ಣ ಪೂಜಾರಿ, ರಮೇಶ್, ರಾಜ ಕುಲಾಲ, ದೀಪಕ್ ಕುಮಾರ್, ಅರುಣ್ ನಾಯ್ಕ, ನವೀನ ನಾಯ್ಕ, ಪ್ರದೀಪ್ ನಾಯ್ಕ, ನಾಗೇಶ ನಾಯ್ಕ, ಸಂಪತ್ ನಾಯ್ಕ, ಸಂತೋಷ್ ಕುಲಾಲ್, ರಾಘವೇಂದ್ರ ಪೂಜಾರಿ, ಚಂದ್ರ ಮಡಿವಾಳ, ಸಂತೋಷ್ ನಾಯ್ಕ, ಮುದ್ದು ನಾಯ್ಕ, ಕೃಷ್ಣ ಮಡಿವಾಳ, ಗಣೇಶ್ ಪೂಜಾರಿ ಇದ್ದರು. ಶಿಕ್ಷಕ ಸತೀಶ್ ಬೇಳಂಜೆ ನಿರೂಪಿಸಿದರು. ರಮಿತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ರಾಜು ಕುಲಾಲ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.