ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೂಜಾ ಕೈಂಕರ್ಯಗಳಲ್ಲಿ ತುಳು ಭಾಷೆ’

Last Updated 11 ಡಿಸೆಂಬರ್ 2022, 6:46 IST
ಅಕ್ಷರ ಗಾತ್ರ

ಕಾರ್ಕಳ: ಸುಮಾರು 300 ವರ್ಷಗಳ ಹಿಂದೆ ಉಡುಪಿ, ಮಂಗಳೂರು, ಕಾಸರಗೋಡು ಮತ್ತು ಉತ್ತರ ಕನ್ನಡದ ಕೆಲವು ಪ್ರದೇಶಗಳಲ್ಲಿ ಭಾಷೆ ಎಂದರೆ ತುಳು ಲಿಪಿ ಎಂದಾಗಿತ್ತು. ತುಳುನಾಡಿನ ಎಲ್ಲ ದೇವಸ್ಥಾನಗಳಲ್ಲೂ ಪೂಜಾ ಕೈಂಕರ್ಯಗಳ ಶಿಕ್ಷಣ ಪಡೆಯುವವರು ತುಳು ಲಿಪಿಯನ್ನು ಕಲಿಯಬೇಕಾಗಿತ್ತು ಎಂದು ಪಲಿಮಾರು ಯೋಗದೀಪಿಕಾ ವಿದ್ಯಾಪೀಠದ ಪ್ರಾಂಶುಪಾಲ ಡಾ. ಶಂಕರನಾರಾಯಣ ಭಟ್ ಹೇಳಿದರು.

ಇಲ್ಲಿನ ರೋಟರಿ ಬಾಲಭವನದಲ್ಲಿ ಜೈ ತುಲುನಾಡ್ ಸಂಘಟನೆಯ ನೇತೃತ್ವದಲ್ಲಿ ಹಲವು ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ನೆತ್ತೆರ್ ಉಂಬೊಲಿ’ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಭಾಷೆ ಮತ್ತು ಲಿಪಿ ಎರಡನ್ನೂ ಹೊಂದಿರುವ ಭಾಷೆಗಳಲ್ಲಿ ತುಳು ಒಂದಾಗಿದ್ದು, ಈಗಲೂ ಪ್ರತಿದಿನ ಕೆಲವು ದೇವಸ್ಥಾನಗಳಲ್ಲಿ ತುಳುವನ್ನು ಬಳಸುವ ಪದ್ಧತಿ ಚಾಲ್ತಿಯಲ್ಲಿದೆ ಎಂದರು.

ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಾ. ಆಕಾಶ್ ರಾಜ್ ಜೈನ್ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಆದಾಯವನ್ನು ತಂದುಕೊಡುವ ಜಿಲ್ಲೆಗಳಲ್ಲಿ ತುಳುನಾಡಿನ ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. ಆದರೂ ಇಲ್ಲಿನ ನೆಲದ ಭಾಷೆ ತುಳುವಿಗೆ ರಾಜ್ಯ ಆಡಳಿತ ಭಾಷಾ ಸ್ಥಾನಮಾನ ಸಿಗದಿರುವುದು ಬೇಸರದ ಸಂಗತಿ ಎಂದರು.

ಜೈ ತುಲುನಾಡ್ ಸಂಘಟನೆಯ ಅಧ್ಯಕ್ಷ ಅಶ್ವತ್ಥ್ ತುಳುವೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಸ್ಪತ್ರೆ ರಕ್ತನಿಧಿಯ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ, ಜಿ.ಎಸ್.ಬಿ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್. ವಿವೇಕಾನಂದ ಶೆಣೈ, ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಸಹ ವ್ಯವಸ್ಥಾಪಕ ನಿತೇಶ್ ಕುಮಾರ್, ಯುವ ವಾಹಿನಿ ಘಟಕದ ಅಧ್ಯಕ್ಷ ತಾರಾನಾಥ ಕೋಟ್ಯಾನ್, ಜಾರ್ಕಳ-ಮುಂಡ್ಲಿಯ ಸೌಹಾರ್ದ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಪ್ರಜ್ವಲ್ ಜೈನ್, ಸುಧೀರ್ ಪೂಜಾರಿ, ಬಜಗೋಳಿ ನೆಲ್ಲಿಗುಡ್ಡೆ ಗೆಳೆಯರ ಬಳಗದ ಅಧ್ಯಕ್ಷ ಸುರೇಶ್ ಸಾಲಿಯಾನ್, ಕಾಂತರಗೋಳಿ ಛತ್ರಪತಿ ಶಿವಾಜಿ ಮಹಾರಾಜ್ ಬಳಗದ ಅಧ್ಯಕ್ಷ ಸತೀಶ್ ಪೂಜಾರಿ ಇದ್ದರು.

60ಕ್ಕೂ ಹೆಚ್ಚು ಜನರು ರಕ್ತದಾನಮಾಡಿದರು. ಜೊತೆ ಕಾರ್ಯದರ್ಶಿ ರಾಜೇಶ್ ತುಲುವೆ ಉಪ್ಪೂರು ಸ್ವಾಗತಿಸಿದರು. ಸ್ವರಾಜ್ ಶೆಟ್ಟಿ ನಿರೂಪಿಸಿದರು. ಆತ್ಮ ಕೆ. ತುಳುಗೀತೆ ಹಾಡಿದರು. ವಿಶು ಶ್ರೀಕೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT