ಬ್ರಹ್ಮಾವರ: ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯಿತಿ, ಕೋಟದ ಉಸಿರು, ಬ್ರಹ್ಮಾವರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಣೂರು ಗೀತಾನಂದ ಫೌಂಡೇಷನ್, ಕೋಟತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಆಸರೆಯಲ್ಲಿ ಮೇ 4ರಂದು ಕುಂದಾಪ್ರ ಕನ್ನಡ 5ನೇ ಸಾಹಿತ್ಯ ಸಮ್ಮೇಳನ ಕೋಟದ ಕಾರಂತ ಥೀಂ ಪಾರ್ಕ್ನಲ್ಲಿ ನಡೆಯಲಿದೆ.

ಸಾಹಿತಿ ಅಣ್ಣಯ್ಯ ಕುಲಾಲ ಉಳ್ತೂರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಬಾರಿಕೆರೆ ಅಧ್ಯಕ್ಷತೆ ವಹಿಸುವರು. ಉಡುಪಿ ಅಂಬಲಪಾಡಿಯ ಡಾ.ವಿಜಯ ಬಲ್ಲಾಳ ಪಾಲ್ಗೊಳ್ಳುವರು.

ಸಮ್ಮೇಳನದ ಪ್ರಯುಕ್ತ ಬೆಳಿಗ್ಗೆ 11.30ರಿಂದ ಕವಿಗೋಷ್ಠಿ, ಕುಂದ ಕನ್ನಡದ ಹರಟೆ, ಅಧ್ಯಕ್ಷರೊಂದಿಗೆ ಮಾತುಕತೆ, ಕೆ.ಸಿ.ಕುಂದರ್ ದತ್ತಿನಿಧಿ ಪ್ರದಾನ ನಡೆಯಲಿದೆ.

ಕುಂದಗನ್ನಡಕ್ಕಾಗಿ ಸೇವೆ ಸಲ್ಲಿಸಿದ ಪಂಜು ಗಂಗೊಳ್ಳಿ, ಯಾಕೂಬ್ ಖಾದರ್ ಗುಲ್ವಾಡಿ ಅವರನ್ನು ಗೌರವಿಸಲಾಗುವುದು. ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆನಂದ ಸಿ ಕುಂದರ್ ವಹಿಸಲಿದ್ದು, ಡಾ.ಬಾಲಕೃಷ್ಣ ಶೆಟ್ಟಿ ಸಮಾರೋಪ ಭಾಷಣ ಮಾಡುವರು ಎಂದು ಸಮ್ಮೇಳನದ ಸಂಯೋಜಕ ನರೇಂದ್ರ ಕುಮಾರ್ ಕೋಟ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.