25 ಸೆಂ.ಮೀ ಉದ್ದ, 15 ಸೆಂ.ಮೀ ಅಗಲದ ಚಿಟ್ಟೆ
ಬೃಹತ್ ಪಾತರಗಿತ್ತಿ ಪತ್ತೆ

ಉಡುಪಿ: ಪರ್ಕಳದ ಶೆಟ್ಟಿಬೆಟ್ಟು ವಾರ್ಡ್ನ ಮಾರುತಿ ನಗರದಲ್ಲಿ ದೊಡ್ಡ ಗಾತ್ರದ ಚಿಟ್ಟೆ ಪತ್ತೆಯಾಗಿದೆ.
ಅಕ್ಕು ಎಂಬವರ ಮನೆಯ ಅಂಗಳದಲ್ಲಿ ಸಿಕ್ಕಿರುವ 25 ಸೆಂ.ಮೀ ಉದ್ದ ಹಾಗೂ 15 ಸೆಂ.ಮೀ ಅಗಲದ ಜಿಟ್ಟೆ ನೋಡಲು ಆಕರ್ಷಕವಾಗಿದೆ. ಅಗಲವಾದ ರೆಕ್ಕೆಯನ್ನು ಹೊಂದಿದ್ದು, ಮೈಮೇಲಿನ ಚಿತ್ತಾಕರ್ಷಕ ರಚನೆಯಿಂದ ಗಮನ ಸೆಳೆಯುತ್ತಿದೆ.
ತೆಂಗಿನ ಮರದಲ್ಲಿ ಕುಳಿತಿದ್ದ ದೊಡ್ಡಗಾತ್ರ ಚಿಟ್ಟೆಯನ್ನು ಗಮನಿಸಿದ ಸ್ಥಳೀಯ ನಿವಾಸಿ ಗಣೇಶ್ ಕುಮಾರ್ ಚಿಟ್ಟೆಯನ್ನು ರಕ್ಷಿಸಿ ತೆಂಗಿನ ಗರಿಯ ಹೊದಿಕೆಯಲ್ಲಿರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.