ಬೈಂದೂರು: ರೈತಾಪಿ ವರ್ಗದ ಏಕೈಕ ಕ್ರೀಡೆಯೆಂದರೆ ಕಂಬಳ. ಸರ್ಕಾರವು ಕ್ರೀಡಾ ಪ್ರಾಧಿಕಾರದಲ್ಲಿ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಿ, ರಾಜ್ಯ ಕಂಬಳ ಅಸೋಸಿಯೇಷನ್ ರಚನೆ ಮಾಡಿದೆ. ಕಂಬಳ ಉತ್ತೇಜನಕ್ಕಾಗಿ ಸರ್ಕಾರದಿಂದ ಅನುದಾನ ದೊರಕಿಸಿ ಕೊಡುವಲ್ಲಿ ಪ್ರಯತ್ನಿಸಲಾಗುವುದು ಎಂದು ರಾಜ್ಯ ಕಂಬಳ ಅಸೋಸಿಯೇಷನ್ನ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಹೇಳಿದರು.

ಬೈಂದೂರು ತಾಲ್ಲೂಕು ಸಾಂಪ್ರದಾಯಕ ಮತ್ತು ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ, ಬುಧವಾರ ತಾಲ್ಲೂಕಿನ ಕಳವಾಡಿಯಲ್ಲಿ ದಿ. ವೆಂಕಟ ಪೂಜಾರಿ ಸಸಿಹಿತ್ಲು ಇವರ ನೆನಪಿನಲ್ಲಿ ನಡೆದ ‘ಪ್ರಥಮ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ‘ಕಂಬಳ ಕ್ರೀಡೆಗೆ ತಡೆ ಉಂಟಾದ ಸಂದರ್ಭದಲ್ಲಿ, ಅದರ ವಿರುದ್ಧ ಹೋರಾಟ ಮಾಡಿ ಯಶಸ್ವಿಯಾಗುವಲ್ಲಿ ಈ ಭಾಗದ ಜನರ ಪಾತ್ರ ಬಹಳಷ್ಟು ಇದೆ’ ಎಂದರು.

ಕಂಬಳ ಕ್ಷೇತ್ರದ ಹಿರಿಯರಾದ ಮರವಂತೆ ರಿಚರ್ಡ್ ರೆಬೆಲ್ಲೊ ಕರೆ ಉದ್ಘಾಟನೆ ನೆರವೇರಿಸಿದರು. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ಕುಮಾರ್ ಶೆಟ್ಟಿ ಇದ್ದರು.

ಸಭಾ ಕಾರ್ಯಕ್ರಮದಲ್ಲಿ ಶಾಸಕ ಗುರುರಾಜ ಗಂಟಿಹೊಳೆ, ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ಶಾಂತಾರಾಂ ಶೆಟ್ಟಿ ಬಾರ್ಕೂರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ರಾಜ್ಯ ಕಂಬಳ ಅಸೋಸಿಯೇಷನ್ ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಕಾರ್ಯಕಾರಿ ಸದಸ್ಯ ವಿಕ್ರಂ ಪೂಜಾರಿ, ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಬಿ. ವಿಶ್ವೇಶ್ವರ ಅಡಿಗ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂಜಯ ನಾಯಕ್, ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ, ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳದ ಕಾರ್ಯದರ್ಶಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಭಜನಾ ಪರಿಷತ್ ಅಧ್ಯಕ್ಷ ರಘುರಾಮ್ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ನ ಮೇಲ್ವಿಚಾರಕ ಶಿವರಾಂ ಪೂಜಾರಿ, ಗೋಪಾಲ್ ಶೆಟ್ಟಿ ಮೂರೂರು, ರಾಜು ಗಾಣಿಗ ಮುಳುವಾಡಿ, ಸಂತೋಷ್ ಪೂಜಾರಿ ಸ್ವಾಮಿಧಾಮ ಕುಂಭಾಶಿ, ಜಯರಾಮ್ ಶೆಟ್ಟಿ ಮಂಡಾಡಿ, ಬೋಳಂಬಳ್ಳಿ ಪರಮೇಶ್ವರ್ ಭಟ್, ಶೇಖರ್ ಖಾರ್ವಿ, ವಿಜಯ್ ಪೂಜಾರಿ ಕೊಡೇರಿ, ಸಂದೇಶ್ ಭಟ್ , ಶರತ್ ಶೆಟ್ಟಿ ಉಪ್ಪುಂದ ಮುತ್ತಯ್ಯ ಪೂಜಾರಿ ಸಸಿಹಿತ್ಲು, ರವೀಂದ್ರ ಶೆಟ್ಟಿ ಕಾರಿಕಟ್ಟೆ ಇದ್ದರು.

ಬೈಂದೂರು ತಾಲ್ಲೂಕು ಕಂಬಳ ಸಮಿತಿ ವತಿಯಿಂದ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ, ಕಂಬಳ ಕ್ಷೇತ್ರದಲ್ಲಿ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ ದೇವಾಡಿಗ, ಸ್ಥಳ ದಾನಿಗಳಾದ ಅಣ್ಣಪ್ಪಯ್ಯ ಆಚಾರ್ಯ ಹಾಗೂ ಇಂದಿರಾ ಸೀತರಾಮ ಕೊಠಾರಿ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ಒಟ್ಟು 65 ಜತೆ ಕೋಣಗಳು ಭಾಗವಹಿಸಿದ್ದವು.

ಕಳವಾಡಿ ಮಾರಿಕಾಂಬಾ ಮಹಿಳಾ ಭಜನಾ ಮಂಡಳಿ ಸದಸ್ಯೆಯರು ಪ್ರಾರ್ಥಿಸಿದರು. ದಿನೇಶ ಆಚಾರ್ಯ ಸ್ವಾಗತಿಸಿದರು. ಬೈಂದೂರು ತಾಲ್ಲೂಕು ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಬಡಾಮನೆ ವಂದಿಸಿದರು. ಕಿರಣ್ ಬಿಜೂರು ನಿರೂಪಿಸಿದರು.

ಕಂಬಳ ಸ್ಪರ್ಧೆಯ ಫಲಿತಾಂಶ

ಹಲಗೆ ವಿಭಾಗ: ಕುಪ್ಪಯ್ಯ ನಾಯ್ಕ ಗೊರಟೆ ಭಟ್ಕಳ (ಪ್ರಥಮ) ನೇರಳಕಟ್ಟೆ ಕೊಡ್ಲಾಡಿ ಆದ್ವಿನ್ ರವಿರಾಜ್ ಶೆಟ್ಟ (ದ್ವಿತೀಯ) ಸ್ವಾಮಿಧಾಮ ಹೊಳೆಕಟ್ಟು ಕುಂಬಾಶಿ (ತೃತೀಯ) ಮೊಳೆಬೈಲು ಗಂಗೆಬೈಲು ದಿ. ಶುಕ್ರ ಪೂಜಾರಿ (ಚತುರ್ಥ) ಸ್ಥಾನ ಪಡೆದಿದ್ದಾರೆ. ಹಗ್ಗ ಅತಿ ಕಿರಿಯ ವಿಭಾಗ: ದಿ. ಶೀನ ಪೂಜಾರಿ ವಿ.ಕೆ. ಗ್ರೂಪ್ಸ್ ಕಮ್ಮಟ್ಟು ಹೊಸಮನೆ ಬನ್ನಾಡಿ (ಪ್ರಥಮ) ಆಸಿಕಾನ್ ಜೋಗಿನಮನೆ ಭಟ್ಕಳ ಶಂಕರ ನಾಗೂರು (ದ್ವಿತೀಯ) ಸಮೃದ್ಧಿ ಪ್ರಸಿದ್ಧಿ ದುರ್ಗಾ ಫ್ರೆಂಡ್ಸ್ ಕಂಚಿಕಾನ್ ಬಿ. (ತೃತೀಯ) ವರಶ್ರೀ ವಾದಿರಾಜ ಹಾಲಾಡಿ (ಚತುರ್ಥ) ಸ್ಥಾನ ಗಳಿಸಿದ್ದಾರೆ. ಹಗ್ಗ ಕಿರಿಯ ವಿಭಾಗ: ದಿ. ಬಾಬಣ್ಣ ನಾಯ್ಕ ಕೊಕ್ಕರ್ಣೆ ವಡ್ಡಪ್ಪಿ (ಪ್ರಥಮ) ಮಂಜು ಪೂಜಾರಿ ಮಯ್ಯಾಡಿ ಪಿಣ್ಕಿಮನೆ (ದ್ವಿತೀಯ) ಶ್ರೀದುರ್ಗಾ ಕೃಷ್ಣ ಮೇಸ್ತ್ರಿ ಕೂಡ್ಲಿ ಬಾರ್ಕೂರು (ತೃತೀಯ) ಸಮೃದ್ಧಿ ಪ್ರಸಿದ್ಧಿ ದುರ್ಗಾ ಫ್ರೆಂಡ್ಸ್ ಕಂಚಿಕಾನು (ಚತುರ್ಥ) ಸ್ಥಾನ ಪಡೆದಿದ್ದಾರೆ. ಹಗ್ಗ ಹಿರಿಯ ವಿಭಾಗ: ಕೋಟ ಮಣೂರು ಪಡುಕೆರೆ ದಿ. ಸೀನ ಪೂಜಾರಿ (ಪ್ರಥಮ) ಬೈಂದೂರು ಸಸಿಹಿತ್ತು ದಿ. ವೆಂಕಟ ಪೂಜಾರಿ (ದ್ವಿತೀಯ) ಗಿರಿಜಾ ರೋಡ್ಲೈನ್ಸ್ ಕೋಟ ಗಾಡಿ ಕೂಸ ಪೂಜಾರಿ ಎ. (ತೃತೀಯ) ಗಿರಿಜಾ ರೋಡ್ಲೈನ್ಸ್ ಕೋಟ ಗಾಡಿ ಕೂಸ ಪೂಜಾರಿ ಬಿ. (ಚತುರ್ಥ) ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.