ಇಬ್ಬರೂ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದು, ಆತ್ಮೀಯ ಮಿತ್ರರಾಗಿದ್ದರು. ಮಂಗಳವಾರ ಪರೀಕ್ಷೆ ಮುಗಿಸಿ ಮನೆಗೆ ತೆರಳಿ ಅಲ್ಲಿಂದ ಮಧ್ಯಾಹ್ನ 4 ಗಂಟೆಗೆ ಕೆರೆಕಟ್ಟೆ ಹೊಸಕೆರೆಗೆ ಈಜಲು ತೆರಳಿದ್ದರು. ರಾತ್ರಿಯಾದರೂ ಮಕ್ಕಳು ಮನೆಗೆ ಬಾರದೆ ಇದ್ದುದರಿಂದ ಪೋಷಕರು ಬೈಂದೂರು ಠಾಣೆಗೆ ದೂರು ನೀಡಿದ್ದರು. ಹೊಸಕೆರೆ ಬಳಿ ಸೈಕಲ್, ಬಟ್ಟೆ, ಎರಡು ಜೊತೆ ಚಪ್ಪಲಿ ಇರುವ ಬಗ್ಗೆ ದೊರೆತ ಮಾಹಿತಿಯಂತೆ ಕೆರೆಯಲ್ಲಿ ಹುಡುಕಾಡಿದಾಗ ತಡರಾತ್ರಿ ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದೆ.