ಶುಕ್ರವಾರ, ಡಿಸೆಂಬರ್ 4, 2020
24 °C

ಗದ್ದಗೆ ಬಿದ್ದ ಮಣಿಪಾಲ ವಿದ್ಯಾರ್ಥಿಯ ಕಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕೆಳ ಪರ್ಕಳದ ವೇಣುಗೋಪಾಲಕೃಷ್ಣ ದೇವಸ್ಥಾನದ ಸಮೀಪದ ಗದ್ದೆಯಲ್ಲಿ ಭಾನುವಾರ ಕೇರಳ ನೋಂದಣಿಯ ಕಾರೊಂದು ಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದಾಗ ಕಾರು ಮಣಿಪಾಲದ ಎಂಬಿಬಿಎಸ್ ವಿದ್ಯಾರ್ಥಿ ಅರ್ಜುನ್‌ನದ್ದು ಎಂಬ ವಿಚಾರ ತಿಳಿಯಿತು.

ಅವಘಡದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಕೇರಳದ ಶೈಲೇಶ್‌ ಎಂಬುವರ ಹೆಸರಿನಲ್ಲಿ ಕಾರು ನೋಂದಣಿಯಾಗಿದ್ದು, ಅವರ ಮಗ ಅರ್ಜುನ್‌ ಕಾರನ್ನು ಓಡಿಸುತ್ತಿದ್ದರು. ಭಾನುವಾರ ಕಡಿದಾದ ರಸ್ತೆಯಲ್ಲಿ ಚಲಾಯಿಸುವಾಗ ಬ್ರೇಕ್‌ ಫೇಲ್‌ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಗದ್ದೆಗೆ ಬಿದ್ದಿದೆ. ಹಬ್ಬದ ಸಂದರ್ಭವಾಗಿರುವುದರಿಂದ ವಾಹನ ಮೇಲೆತ್ತುವ ಕ್ರೇನ್‌ ಲಭ್ಯವಾಗಿಲ್ಲ. ಸೋಮವಾರ ಮೇಲೆತ್ತಲಾಗುವುದು ಎಂದು ಪೊಲೀಸರು ತಿಳಿಸಿದರು.

ಕೆಲಕಾಲ ಆತಂಕ: ಗದ್ದೆಯಲ್ಲಿ ಕಾರು ಪ್ರತ್ಯಕ್ಷವಾಗಿದ್ದನ್ನು ಕಂಡು ಸ್ಥಳೀಯರು ಭೀತಿಯಿಂದ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಅಪರಾಧ ಕೃತ್ಯಗಳನ್ನು ಎಸಗಿ ಕಾರನ್ನು ತಂದು ಗದ್ದೆಗೆ ಹಾಕಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಕೊನೆಗೆ ಪೊಲೀಸರ ವಿಚಾರಣೆಯಿಂದ ಸತ್ಯ ಬಹಿರಂಗವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು