ಬ್ರಹ್ಮಾವರ: ಚಂದ್ರಯಾನ -3ರ ವಿಕ್ರಮ್ ಲ್ಯಾಂಡರ್‌ನ ಕಾಲಿನ ಪಾದದ ಡೈನಾಮಿಕ್ಸ್ ಮಾಡಿದ ವಿಜ್ಞಾನಿಗಳಲ್ಲಿ ಓರ್ವರಾದ ಸುಬ್ರಹ್ಮಣ್ಯ ಉಡುಪ ಇ.ಜಿ ಉಡುಪಿ ಜಿಲ್ಲೆಯ ಬಾರ್ಕೂರು ನ್ಯಾಷನಲ್ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ. ಇಸ್ರೊ ಸಂಸ್ಥೆಯಲ್ಲಿ ದೀರ್ಘ ಕಾಲದ ಸೇವೆ ಸಲ್ಲಿಸಿ ಈಚೆಗೆ ನಿವೃತ್ತಿಯಾಗಿರುತ್ತಾರೆ.
ಚಂದ್ರಯಾನ-2, ಚಂದ್ರಯಾನ-3 ಎರಡರಲ್ಲೂ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಸೇವೆಯಿಂದ ನಿವೃತ್ತರಾಗಿದ್ದರೂ ಇಸ್ರೊ ಸಂಸ್ಥೆ ಇವರ ಸೇವೆಯನ್ನು ಪಡೆದುಕೊಂಡಿದೆ. ಇವರು ತೀರ್ಥಹಳ್ಳಿ ಅರಳಸುರಳಿಯ ನಿವೃತ್ತ ಶಿಕ್ಷಕ ಗೋವಿಂದರಾಮ ಹಾಗೂ ಶಾರದ ಉಡುಪ ದಂಪತಿಯ ಪುತ್ರ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಶುಭ ಕೋರಿರುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.