ಹುಬ್ಬಳ್ಳಿಯ ಚೆಸ್ ಅಕಾಡೆಮಿ, ಬೆಂಗಳೂರಿನ ಬಿಜಿಎಸ್-ಎನ್‌ಪಿಎಸ್ ಸ್ಕೂಲ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆದ 7 ವರ್ಷ ವಯಸ್ಸಿನೊಳಗಿನ ರಾಜ್ಯಮಟ್ಟದ ಚೆಸ್ ಟೂರ್ನಿಯಲ್ಲಿ ವಿಹಾನ್ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಜಿ.ಎಂ.ಸಂಸ್ಥೆಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲ ಜಾರ್ಜ್ ಕುರಿಯನ್ ತಿಳಿಸಿದ್ದಾರೆ. ವಿಹಾನ್ ಉಡುಪಿಯ ಶಿಶಿರ್, ಶ್ರೀದೇವಿ ದಂಪತಿಯ ಪುತ್ರ.