ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕ್ರಿಯಾಶೀಲತೆಗೆ ಯಕ್ಷಗಾನ ಸಹಕಾರಿ: ಸುದರ್ಶನ ಉರಾಳ

ಚಿತ್ರಪಾಡಿ ‘ಧೀಂಕಿಟ’ ಯಕ್ಷ ಶಿಬಿರಕ್ಕೆ ಸುದರ್ಶನ ಉರಾಳ ಚಾಲನೆ
Last Updated 12 ಜೂನ್ 2022, 6:14 IST
ಅಕ್ಷರ ಗಾತ್ರ

ಸಾಲಿಗ್ರಾಮ(ಬ್ರಹ್ಮಾವರ): ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸುವಲ್ಲಿ ಯಕ್ಷಗಾನದಂತಹ ಕಲೆಯ ಕಲಿಕೆ ಪೂರಕವಾದುದು ಎಂದು ಯಕ್ಷಗುರು, ಯಕ್ಷದೇಗುಲದ ಸುದರ್ಶನ ಉರಾಳ ಹೇಳಿದರು.

ಸಾಲಿಗ್ರಾಮ ಮಕ್ಕಳ ಮೇಳವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಾಲಿಗ್ರಾಮ ಚಿತ್ರಪಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿರುವ 10 ದಿನಗಳ ‘ಧೀಂಕಿಟ’ ಯಕ್ಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನದಿಂದ ದೈಹಿಕ ವ್ಯಾಯಾಮದೊಂದಿಗೆ ಮಾನಸಿಕ ಬೆಳವಣಿಗೆ ಆಗುತ್ತದೆ. ಪುರಾಣ ಜ್ಞಾನದಿಂದ ಮಕ್ಕಳ ಮನಸ್ಸು ಅರಳುತ್ತದೆ. ವಿದ್ಯಾಲಯಗಳಲ್ಲಿ ಯಕ್ಷಗಾನದ ಕಲಿಕೆ ನಿರಂತರವಾಗಿರಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಪಿ. ಮಾತನಾಡಿ, ‘ಯಕ್ಷಗಾನವು ಕಣ್ಣಿಗೆ ಆಕರ್ಷಣಿಯವಾದ ಕಲೆಯಾಗಿದೆ. 10 ದಿವಸಗಳಲ್ಲಿ ಪೂರ್ಣ ಯಕ್ಷಗಾನ ಕಲಿಕೆ ಸಾಧ್ಯವಾಗದಿದ್ದರೂ ಮಕ್ಕಳಿಗೆ ಅದರ ಪರಿಚಯ ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರ ದೇವಾಡಿಗ, ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ, ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಹಾಗೂ ಉಪನ್ಯಾಸಕ ಸುಜಯೀಂದ್ರ ಹಂದೆ, ಭಾಗವತ ಗುರು ಲಂಬೋದರ ಹೆಗಡೆ, ಕಲಾವಿದ ಸುಹಾಸ ಕರಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT