ಕಾರ್ಕಳ: ‘ದೂರವಾಣಿ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಿಜೆಪಿ ಮುಖಂಡನ ಕುರಿತ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಮತ್ತು ಎನ್ಎಸ್ಯುಐ ಪ್ರತೇಕವಾಗಿ ಕಾರ್ಕಳ ಠಾಣೆಯಲ್ಲಿ ದೂರು ಸಲ್ಲಿಸಿವೆ.

‘ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಆಡಿಯೊದಲ್ಲಿ ಬಿಜೆಪಿ ಮುಖಂಡ ವಿದ್ಯಾರ್ಥಿನಿಯನ್ನು ತನ್ನ ಜೊತೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ಹಿಂದೆಯೂ ಒಂದು ಕಾಲೇಜಿನಲ್ಲಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಕಾಲೇಜು ಆಡಳಿತ ಮಂಡಲಿ ಕೆಲಸದಿಂದ ವಜಾ ಮಾಡಿತ್ತು. ಮುಖಂಡನನ್ನು ಬಂಧಿಸಿ ಮೊಬೈಲ್ ವಶಕ್ಕೆ ಪಡೆದರೆ ಅವರ ಕಿರುಕುಳಕ್ಕೆ ಒಳಗಾದವರ ಮಾಹಿತಿ ಸಿಗುವ ಸಾಧ್ಯತೆಯಿದೆ. ಕುರಿತು ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು’ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಪೂಜಾರಿ, ರೀನಾ ಜೂಲಿಯೆಟ್, ಪುರಸಭೆ ಸದಸ್ಯೆ ಪ್ರತಿಮಾ ರಾಣೆ, ಪ್ರಭಾ ಕಿಶೋರ್, ರೆಹಮತ್, ಸುನೀತಾ ಶೆಟ್ಟಿ, ಆಶಾ ಬೈಲೂರು, ಶೋಭಾಪ್ರಸಾದ್, ಶೋಭಾ ರಾಣೆ, ರಾಜೇಶ್ವರಿ ಸಾಣೂರು, ಚರಿತ್ರಾ, ಎನ್ಎಸ್ಯುಐ ಅಧ್ಯಕ್ಷ ಗುರುದೀಪ್ ನಿಟ್ಟೆ, ಉದಿತ್ ಶೆಟ್ಟಿಗಾರ್, ಪದಾಧಿಕಾರಿಗಳಾದ ಸಂಸ್ಕೃತ್ ಎನ್.ಆರ್., ಈವನ್ಸ್, ನಿತೀಶ್, ಸುನಿಲ್ ಭಂಡಾರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.