ಕೊರೊನಾ ಸೋಂಕು ಈಗ ದೊಡ್ಡ ನಗರಗಳಿಂದ ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೆ ತನ್ನ ಕಬಂಧಬಾಹುಗಳನ್ನು ಚಾಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಇರುವುದರಿಂದ ಕೋವಿಡ್ ಪೀಡಿತರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳೇನು, ಚಿಕಿತ್ಸೆಗೆ ಇರುವ ಕೊರತೆಗಳೇನು ಎಂಬ ವಸ್ತುಸ್ಥಿತಿಯ ಚಿತ್ರಣ ನೀಡಲು ಪ್ರಜಾವಾಣಿ ಸ್ಥಳಕ್ಕೆ ಭೇಟಿ ನೀಡಿ ಸರಣಿ ವರದಿಗಳನ್ನು ನೀಡುತ್ತಿದೆ. ಈ ಸರಣಿ ಇಂದು ಆರಂಭ.

ಉಡುಪಿ: ‘ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಗಳಿವೆ. ಇಲ್ಲಿನ ರೋಗಿಗಳನ್ನು ನೋಡಿಕೊಳ್ಳಲು ವೈದ್ಯರೇ ಇಲ್ಲ. ಇರುವ ವೈದ್ಯರನ್ನು ಬೇರೆಡೆ ನಿಯೋಜನೆ ಮಾಡಲಾಗಿದೆ. ತಾತ್ಕಾಲಿಕವಾಗಿ ನಿವೃತ್ತ ವೈದ್ಯರೊಬ್ಬರನ್ನು ನೇಮಕ ಮಾಡಿದ್ದಾರೆ. ಸರ್ಕಾರ, ಸಚಿವರು, ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಒತ್ತಾಯ ಮಾಡಿದರೂ ವೈದ್ಯರ ನೇಮಕಾತಿ ಆಗುತ್ತಿಲ್ಲ. ಕೋವಿಡ್–19 ಪಿಡುಗಿನ ಕಾಲದಲ್ಲಿ ಗ್ರಾಮೀಣ ಜನರಿಗೆ ಆಸರೆ ಆಗಬೇಕಿದ್ದ ಆಸ್ಪತ್ರೆಯ ಹಾಸಿಗೆಗಳು ವ್ಯರ್ಥವಾಗಿ ಉಳಿದಿವೆ’ ಎನ್ನುವ ಆಕ್ರೋಶ ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್. ಪಾಟ್ಕರ್ ಅವರದ್ದು.

‘ತಾಲ್ಲೂಕು ಕೇಂದ್ರವಾಗಿರುವ ಕಾಪುವಿನಲ್ಲಿ ಈಗಲೂ ಪ್ರಾಥಮಿಕ ಆರೋಗ್ಯ ಕೇಂದ್ರವೇ ಇದೆ. ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಗಂಭೀರ ಪರಿಸ್ಥಿತಿಯಲ್ಲಿ ಇರುವ ಇಲ್ಲಿನ ರೋಗಿಗಳನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಬೇಕಾಗಿದೆ. ಸರ್ಕಾರ ತಾಲ್ಲೂಕು ಮಾಡಿದ್ದಾದರೂ ಏಕೆ’ ಎನ್ನುವ ಪ್ರಶ್ನೆ ಕಾಪುವಿನ ಪುರುಷೋತ್ತಮ ಸಾಲ್ಯಾನ್ ಅವರದ್ದು.

ಈ ಆಕ್ರೋಶ, ಪ್ರಶ್ನೆಗಳಿಂದಲೇ ಜಿಲ್ಲೆಯ ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಯ ಚಿತ್ರಣ ಸ್ಪಷ್ಟವಾಗುತ್ತದೆ. ಜಿಲ್ಲೆಯಲ್ಲಿ ಕೆಲವೆಡೆ ಸೌಕರ್ಯಗಳಿದ್ದರೂ ಬಳಕೆಯಾಗುತ್ತಿಲ್ಲ. ಇನ್ನೂ ಕೆಲವೆಡೆ ಸೌಕರ್ಯಗಳೇ ಇಲ್ಲ.

ಮೂರು ತಾಲ್ಲೂಕುಗಳಿದ್ದ ಉಡುಪಿ ಜಿಲ್ಲೆಯಲ್ಲಿ ಈಗ ಏಳು ತಾಲ್ಲೂಕುಗಳಾಗಿವೆ. ವಿಚಿತ್ರ ಎಂದರೆ ಸದ್ಯ ಇಡೀ ಜಿಲ್ಲೆಯಲ್ಲಿ ಕಾರ್ಕಳದಲ್ಲಿ ಮಾತ್ರ ತಾಲ್ಲೂಕು ಆಸ್ಪತ್ರೆ ಇದೆ. ಕುಂದಾಪುರದ ತಾಲ್ಲೂಕು ಆಸ್ಪತ್ರೆಯನ್ನು ಉಪವಿಭಾಗ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಉಡುಪಿ ತಾಲ್ಲೂಕು ಆಸ್ಪತ್ರೆ ಈಗ ಜಿಲ್ಲಾ ಆಸ್ಪತ್ರೆಯಾಗಿದೆ.

ಇದನ್ನೂ ಓದಿ:ಕೊಡಗು | ಕೊರೊನಾ ಸೃಷ್ಟಿಸಿದ ತಲ್ಲಣ: ಗುಡ್ಡಗಾಡು ಪ್ರದೇಶದ ಜನರ ಕಣ್ಣೀರು

ಬೈಂದೂರು, ಕಾಪು, ಬ್ರಹ್ಮಾವರ, ಹೆಬ್ರಿ ಹೊಸ ತಾಲ್ಲೂಕುಗಳಾಗಿವೆ. ಆದರೆ, ಇಲ್ಲಿನ ಆಸ್ಪತ್ರೆಗಳು ಮಾತ್ರ ಮೇಲ್ದರ್ಜೆಗೆ ಏರಿಲ್ಲ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಸಿಗೆಯ ವ್ಯವಸ್ಥೆ ಇಲ್ಲ. ತಪಾಸಣೆ, ಲಸಿಕೆ ಅಭಿಯಾನ, ಗಂಟಲು ದ್ರವ ಮಾದರಿ ಸಂಗ್ರಹಿಸುವ ಕೆಲಸಗಳು ಮಾತ್ರ ನಡೆಯುತ್ತದೆ. ತುರ್ತು ಸಂದರ್ಭದಲ್ಲಿ ಹಾಸಿಗೆ ಬೇಕಾದರೆ ದೊಡ್ಡ ಊರುಗಳೇ ಗತಿ.

ಉಡುಪಿ, ಮಂಗಳೂರೇ ಆಸರೆ: ಉಡುಪಿಯ ಉತ್ತರ ಭಾಗದ ಜನರು ಕುಂದಾಪುರ ಉಪವಿಭಾಗ ಆಸ್ಪತ್ರೆಯನ್ನು ಅವಲಂಬಿಸಿದರೆ, ದಕ್ಷಿಣ ಭಾಗದ ಜನರು ಉಡುಪಿಯ ಟಿಎಂಎ ಪೈ ಆಸ್ಪತ್ರೆ, ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಇಲ್ಲವೇ ಮಂಗಳೂರಿನ ಸರ್ಕಾರಿ ಆಸ್ಪತ್ರೆ
ಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ.

‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ, ಗಂಟಲು ದ್ರವ ಸಂಗ್ರಹಗಳ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಹೋಂ ಐಸೋಲೇಷನ್ನಲ್ಲಿ ಇರುವವರ ಮೇಲೆ ನಿಗಾ ಕೂಡ ವಹಿಸಲಾಗಿದೆ. ಆದರೆ, ಈ ಭಾಗದಲ್ಲಿ ಯಾರಿಗಾದರೂ ಗಂಭೀರ ಸಮಸ್ಯೆಯಾದರೆ, ನಾವು ಉಡುಪಿ, ಇಲ್ಲವೇ ಮಂಗಳೂರಿನ ಆಸ್ಪತ್ರೆಗಳಿಗೇ ಹೋಗಬೇಕು’ ಎನ್ನುತ್ತಾರೆ ಪಡುಬಿದ್ರಿಯ ಸಫ್ವಾನ್.

‘ಖಾಸಗಿ ಆಸ್ಪತ್ರೆಗಳೂ ಉಡುಪಿ, ಕುಂದಾಪುರದಲ್ಲಿಯೇ ಹೆಚ್ಚಾಗಿವೆ. ಆರೋಗ್ಯ ಕೇಂದ್ರಗಳಲ್ಲಿ ಹಾಸಿಗೆ, ಆಮ್ಲಜನಕದ ವ್ಯವಸ್ಥೆ ಮಾಡಿದರೆ, ತುರ್ತು ಸಂದರ್ಭದಲ್ಲಿ ಅನುಕೂಲವಾಗುತ್ತದೆ’ ಎನ್ನುವ ಮನವಿ ಹಿರಿಯರಾದ ಇಸ್ಮಾಯಿಲ್ ಅವರದ್ದು.

ಸೌಕರ್ಯಗಳಿಗೆ ಕೊರತೆ ಇಲ್ಲ
ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ಆಂಬುಲೆನ್ಸ್, ಆಮ್ಲಜನಕ ಸಾಂದ್ರಕ, ಕೋವಿಡ್ ಆರೈಕೆ ಕೇಂದ್ರಗಳಿಗೆ ಕೊರತೆ ಆಗಿಲ್ಲ. ಸಂಘ–ಸಂಸ್ಥೆಗಳಿಂದಲೇ ಅಗತ್ಯ ಸೌಲಭ್ಯ ಒದಗಿಸಲಾಗಿದೆ.

ಲಸಿಕೆಗೆ ಸಂಬಂಧಿಸಿದಂತೆ ಜನರಲ್ಲಿ ಹೆಚ್ಚಿನ ಜಾಗೃತಿ ಇದೆ. ಜೊತೆಗೆ ಆಶಾ ಕಾರ್ಯಕರ್ತೆಯರೂ ಮನೆ ಮನೆಗೆ ತೆರಳಿ, ಲಸಿಕೆ ಹಾಕಿಸಿಕೊಳ್ಳುವ ದಿನದ ಮಾಹಿತಿ ನೀಡುತ್ತಾರೆ. ಹೋಂ ಐಸೋಲೇಷನ್ನಲ್ಲಿ ಇರುವವರ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ. ಇದರ ಜೊತೆಗೆ ಜನರ ಮನೆಗೆ ತೆರಳಿ ಗಂಟಲು ದ್ರವ ಸಂಗ್ರಹ ಮಾಡಲು ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇದನ್ನೂ ಓದಿ:ಕಲಬುರ್ಗಿ | ಸೌಲಭ್ಯಗಳ ಕೊರತೆ ಅನಾವರಣ: ಹಳ್ಳಿಗಳನ್ನು ಕಾಡುತ್ತಿರುವ ಕೊರೊನಾ ಸೋಂಕು

ಜಾರಿಯಾಗದ ಕಟ್ಟುನಿಟ್ಟು ಕ್ರಮ
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದ ಮೊದಲ ಅಲೆಯಲ್ಲಿ ಜನರು ಉಡುಪಿ ಜಿಲ್ಲೆಗೆ ಬರುವುದೇ ದುಸ್ತರ ಎನ್ನುವಂತಾಗಿತ್ತು. ಆದರೆ ಈ ಬಾರಿ ಅಂತಹ ಬಿಗಿ ಕ್ರಮ ಕಾಣುತ್ತಿಲ್ಲ. ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರಿಗೆ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ಮಾಡಿದ್ದರೂ, ಜಿಲ್ಲಾಡಳಿತದ ಆದೇಶ ಪಾಲನೆಯಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಘೋಷಣೆಯಾದ ನಂತರ ಸಾವಿರಾರು ಜನರು ಏಕಾಏಕಿ ಜಿಲ್ಲೆಗೆ ಬಂದಿದ್ದು, ಮತ್ತೆ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳದೇ, ಗಂಭೀರ ಸ್ಥಿತಿ ತಲುಪಿದಾಗ ಆಸ್ಪತ್ರೆಗೆ ಬರುತ್ತಿದ್ದಾರೆ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ವಿವರಣೆ.

ಶಿರ್ವ ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಬಹುದು. ವೈದ್ಯರನ್ನು ತಕ್ಷಣದಿಂದ ಶಿರ್ವದಲ್ಲೇ ಕರ್ತವ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು.
-ಕೆ.ಆರ್. ಪಾಟ್ಕರ್,ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ

100 ಹಾಸಿಗೆಗಳ ಕಾಪು ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಕೋವಿಡ್ ಕಾರಣದಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ.
-ಲಾಲಾಜಿ ಮೆಂಡನ್, ಶಾಸಕ

ಜಿಲ್ಲೆಯ ಜನಸಂಖ್ಯೆಗೆ ಹೋಲಿಸಿದರೆ ಹಾಸಿಗೆಗಳು ಇನ್ನಷ್ಟು ಹೆಚ್ಚಬೇಕು. ಗಂಭೀರ ಸಮಸ್ಯೆ ಇರುವವರನ್ನು ವಾರ್ ರೂಂ ಮೂಲಕ ಉಡುಪಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
-ಡಾ. ಸುಬ್ರಾಯ್ ಕಾಮತ್, ಕಾಪು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.