ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 6 ಸಾವಿರ ಗಡಿಯತ್ತ ಸೋಂಕಿನ ಪ್ರಮಾಣ

ಐವರು ಸೋಂಕಿತರು ಸಾವು; 314 ಮಂದಿಗೆ ಕೋವಿಡ್‌
Last Updated 8 ಆಗಸ್ಟ್ 2020, 15:18 IST
ಅಕ್ಷರ ಗಾತ್ರ

ಉಡುಪಿ: ಉಡುಪಿ 192, ಕುಂದಾಪುರದ 87 ಹಾಗೂ ಕಾರ್ಕಳದ 30 ಸೇರಿ ಶನಿವಾರ ಜಿಲ್ಲೆಯಲ್ಲಿ 314 ಮಂದಿಯಲ್ಲಿ ಕೋವಿಡ್‌–19 ಸೋಂಕು ದೃಢಪಟ್ಟಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 156, ಐಎಲ್‌ಐ ಲಕ್ಷಣಗಳಿದ್ದ 69, ಸಾರಿ ಲಕ್ಷಣಗಳಿದ್ದ 6 ಹಾಗೂ ಇತರೆ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. 79 ಜನರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.

88 ಸೋಂಕಿತರಲ್ಲಿ ರೋಗದ ಲಕ್ಷಣಗಳು ಕಂಡುಬಂದರೆ, 226 ಜನರಲ್ಲಿ ಲಕ್ಷಣಗಳು ಕಂಡುಬಂದಿಲ್ಲ. ಚಿಕಿತ್ಸೆ ಅಗತ್ಯವಿದ್ದ 203 ಜನರಿಗೆ ಕೋವಿಡ್‌ ಆಸ್ಪತ್ರೆಗಳಲ್ಲಿ ಹಾಗೂ ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇರುವ 111 ಮಂದಿಗೆ ಹೋಂ ಐಸೊಲೇಷನ್‌ನಲ್ಲಿರಿಸಿ ನಿಗಾ ವಹಿಸಲಾಗಿದೆ.

ಇದುವರೆಗೂ ಕೋವಿಡ್‌ ಆಸ್ಪತ್ರೆಗಳಲ್ಲಿ 4,316 ಸೋಂಕಿತರು ಚಿಕಿತ್ಸೆ ಪಡೆದರೆ, 1,596 ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.

6 ಸಾವಿರದತ್ತ:ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದ್ದು 5,919ಕ್ಕೇರಿಕೆಯಾಗಿದೆ. ಕಳೆದ 15 ದಿನಗಳಿಂದ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

2,030 ಮಾದರಿ ಸಂಗ್ರಹ:ಸೋಂಕಿನ ಲಕ್ಷಣಗಳಿದ್ದ, ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಾಗೂ ಸಾರಿ, ಐಎಲ್‌ಐ ಲಕ್ಷಣಗಳಿದ್ದ 2,030 ಜನರ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, 1,540 ವರದಿಗಳು ಬರುವುದು ಬಾಕಿ ಇದೆ.

ಶನಿವಾರ 89 ಸೇರಿ ಇದುವರೆಗೂ 3,347 ಸೋಂಕಿತರು ಗುಣಮುಖರಾಗಿದ್ದು, 2512 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT